ವಸತಿ ನಿಲಯ ನಿರ್ಮಾಣಕ್ಕೆ ಚಾಲನೆ
ದೇವದುರ್ಗ: ಪಟ್ಟಣದಲ್ಲಿ ಮಂಗಳವಾರ ಶಾಸಕ ವೆಂಕಟೇಶ್ ನಾಯಕ, 2.20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ, ಮಹಿಳಾ ಸಾಕ್ಷರತೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಶೈಕ್ಷಣಿಕವಾಗಿ ತಾಲೂಕು ಹಿಂದುಳಿದಿದ್ದು, ಹೆಣ್ಣು ಮಕ್ಕಳ ಸಾಕ್ಷರತಾ ಪ್ರಮಾಣ ಕೂಡಾ ತೀರಾ ಕಡಿಮೆಯಾಗಿದೆ. ಮಹಿಳಾ ಸಾಕ್ಷರತೆ ಪ್ರಮಾಣ ಹೆಚ್ಚಳ ವಸತಿ ನಿಲಯಗಳು ನೆರವಾಗಲಿವೆ ಎಂದು ಹೇಳಿದರು.
ಮಾಜಿ ಎಂಲ್ಸಿ ಬಸವರಾಜ ಪಾಟೀಲ್ ಇಟಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಬಸ್ಸಯ್ಯ ಶಾಖೆ, ಎ. ಮಲ್ಲಿಕಾರ್ಜುನ, ಹುಸೇನಸಾಬ ನೀಲವಂಜಿ, ಪ್ರಕಾಶ ಖೇಣದ, ಬಾಪೂಗೌಡ ಚಿಕ್ಕಹೊನ್ನಕುಣಿ, ತಾಲೂಕು ಯುವ ಅಧ್ಯಕ್ಷ ಶೇಖ್ ಮುನ್ನಾಬಾಯಿ, ಮಹಿಳಾ ಘಟಕದ ಅಧ್ಯಕ್ಷೆ ಕರೆಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ, ಶಾಲೆ ಮುಖ್ಯಗುರು ರಂಗಪ್ಪ ಅಕ್ಕರಕಿ, ಶರಣಗೌಡ ಇದ್ದರು.