ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ಜನಸಂಖ್ಯಾ ದಿನಾಚರಣೆ

Lingaraj Badiger
Updated On : 11 Jul 2013, 11:00 am

ರಾಯಚೂರು: ನಗರದ ಟಾಗೋರ್ ಸ್ಮಾರಕ ಸಭಾಂಗಣದಲ್ಲಿ ಜು.11ರಂದು ವಿಶ್ವಜನಸಂಖ್ಯಾ ದಿನಾಚರಣೆ ಸಮಾರಂಭ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ನಡೆಯುವ ಸಮಾರಂಭವನ್ನು ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಉದ್ಘಾಟಿಸಲಿದ್ದಾರೆ. ಜಿಪಂ ಸಿಇಒ ಜ್ಞಾನಪ್ರಕಾಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ ನಾಯಕ, ಸುಭಾಷರೆಡ್ಡಿ ಪಾಟೀಲ್, ಸಹಕಾರ ಸಂಘಗಳ ಉಪನಿಬಂಧಕ ಸಂತೋಷಕುಮಾರ್, ಡಾ.ರಾಜಶೇಖರ್ ಪಾಟೀಲ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ವಿಭಾಗೀಯ ಸಮ್ಮೇಳನ ನಾಳೆ
ರಾಯಚೂರು: ಪತಂಜಲಿ ಯೋಗ ಸಮಿತಿಯ ವಿಭಾಗೀಯ ಸಮ್ಮೇಳನವನ್ನು ಜು.12ರಂದು ನಗರದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ನಗರದ ಶಶಿಮಹಲ್ ಟಾಕೀಸ್ ಎದುರಿನ ಬಾಲಾಜಿ ಮಂದಿರದ ಕಲ್ಯಾಣ ಮಂಟಪದಲ್ಲಿ ವಿಭಾಗೀಯ ಸಮ್ಮೇಳನ ನಡೆಯಲಿದ್ದು, ಯೋಗ ಸಮಿತಿಯ ಯುವಕೇಂದ್ರೀಯ ಮಹಿಳಾ ಪ್ರಭಾರಿ ಡಾ.ಸುಮನ್ ಆರ್ಯ, ಬೆಂಗಳೂರಿನ ಸ್ವಾಮಿ ಜ್ಞಾನೇಶ್ವರಾನಂದಜೀ, ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಜಿ.ವಿ. ಗೌಡ, ಎಂ. ಭಾಸ್ಕರ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ಸಮಿತಿಯ ಪ್ರಕಟಣೆ ತಿಳಿಸಿದೆ. ಸಮ್ಮೇಳನದಲ್ಲಿ ಭ್ರಷ್ಟಾಚಾರ, ಕಪ್ಪುಹಣ, ಯುವಶಕ್ತಿ ನಿರ್ಮಾಣ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ.
ರಕ್ತದಾನ ಶಿಬಿರ ಯಶಸ್ವಿ
ರಾಯಚೂರು: ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ತಂತ್ರಜ್ಜರ ಸಂಘದ ವತಿಯಿಂದ ರಿಮ್ಸ್ ಬೋಧಕ ಆಸ್ಪತ್ರೆ ಆವರಣದಲ್ಲಿ ಈಚೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಬಸವರಾಜ ಹೀರಾಪೂರ ವಹಿಸಿ ಮಾತನಾಡಿ, ರಿಮ್ಸ್ ಬೋಧಕ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಹೆಚ್ಚಿನವರಿಗೆ ರಕ್ತದ ಅವಶ್ಯಕತೆಯಿದ್ದು, ಕೊರತೆ ನೀಗಿಸಲು ರಿಮ್ಸ್ ತಂತ್ರಜ್ಞರು, ಸ್ವಯಂಪ್ರೇರಣೆಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಡಾ. ಅಮರವರ್ಷಾ, ಡಾ. ಟಿ.ಕೆ. ಜಗಜೀವನರಾಂ, ಡಾ. ರಮೇಶ, ಡಾ. ಶರಣಬಸವ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement