ಬಿ-ಟೆಕ್, ಬಿಎಸ್ಸಿ ಪ್ರವೇಶ ಪ್ರಕ್ರಿಯೆ ಅಂತ್ಯ
ರಾಯಚೂರು: ಕೃಷಿ ವಿಶ್ವವಿದ್ಯಾಲಯದಲ್ಲಿ ಜು.8ರಿಂದ ನಡೆದ ಬಿಎಸ್ಸಿ, ಬಿಟೆಕ್(ಕೃಷಿ ತಾಂತ್ರಿಕ) ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ವಿವಿ ತಿಳಿಸಿದೆ.
ವಿವಿ ಆವರಣದಲ್ಲಿ ನಡೆದ ಪ್ರಕ್ರಿಯೆಯಲ್ಲಿ ಪ್ರಸಕ್ತ ಸಾಲಿನ ಪ್ರವೇಶ ಕೌನ್ಸೆಲಿಂಗ್ ಮುಗಿದಿದ್ದು, ಕೃಷಿಕರ ಕೋಟಾದಡಿ ಸೀಟು ಬಯಸಿದ ಅಭ್ಯರ್ಥಿಗಳು ಜು.18ರಂದು ಬೆಳಗ್ಗೆ 9ಕ್ಕೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ವ್ಯವಸಾಯಗಾರರ ಮೂಲ ಪ್ರಮಾಣ ಪತ್ರದೊಂದಿಗೆ ಪರೀಕ್ಷೆಗೆ ಹಾಜರಾಗಲು ವಿವಿ ತಿಳಿಸಿದೆ. ಡಿಪ್ಲೊಮಾ ಕೃಷಿ ಹಾಗೂ ಡಿಪ್ಲೊಮಾ ಕೃಷಿ ತಾಂತ್ರಿಕ ಕೋರ್ಸುಗಳ ಸೀಟುಗಳ ಮಾಹಿತಿಗಾಗಿ ಅಂತರ್ಜಾಲ ವಿಳಾಸ ಢಿಢಿಢಿ.್ಡಛಡ್ಠಝ್ಝ್ಛ್ಡ್ಠ.ಜಜ್ಡ.್ಝಟಿ ಇಲ್ಲಿ ಸಂಪರ್ಕಿಸಿ ಕೌನ್ಸೆಲಿಂಗ್ಗೆ ಹಾಜರಾಗಲು ವಿವಿ ಪ್ರಕಟಣೆ ತಿಳಿಸಿದೆ.