ವಹಿವಾಟಿನ ತರಬೇತಿ
ದೇವದುರ್ಗ: ತಾಲೂಕಿನ ದೊಂಡಂಬಳಿ ಗ್ರಾಮದಲ್ಲಿ ಈಚೆಗೆ ಅಮೂಲ್ಯ ಸಾಕ್ಷರತಾ ಕೇಂದ್ರ ಹಾಗೂ ಬೆಂಗಳೂರಿನ ಕೆನರಾ ಬ್ಯಾಂಕ್ ವತಿಯಿಂದ ಬ್ಯಾಂಕಿಂಗ್ ವಹಿವಾಟಿನ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಶಾಸಕ ಎ. ವೆಂಕಟೇಶ ನಾಯಕ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎ.ಮಲ್ಲಿಕಾರ್ಜುನ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸ್ಸಯ್ಯ ಶಾಖೆ, ಉಪಾಧ್ಯಕ್ಷ ಹುಸೇನಸಾಬ್ ನೀಲುವಂಜಿ, ಅಮೂಲ್ಯ ಸಂಸ್ಥೆಯ ಬಸ್ಸಪ್ಪ, ಬಾಪೂಗೌಡ ಪಾಟೀಲ್, ತೋಟಗಾರಿಕೆ ಇಲಾಖೆಯ ಹನುಮಂತಪ್ಪ ನಾಯ್ಕ ಅನೇಕರಿದ್ದರು.