ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸದಾಶಿವ ಆಯೋಗ: ವರದಿ ಜಾರಿಗೆ ಆಗ್ರಹಿಸಿ ಮನವಿ

Lingaraj Badiger
Updated On : 11 Jul 2013, 10:56 am

ದೇವದುರ್ಗ: ಜಸ್ಟೀಸ್ ಎ.ಜೆ. ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಮಾದಿಗ ಮತ್ತು ಛಲವಾದಿ ಮೀಸಲಾತಿ ಹೋರಾಟ ತಾಲೂಕು ಸಮಿತಿ ಒತ್ತಾಯಿಸಿದೆ. ಸಮಿತಿಯ ಕಾರ್ಯಕರ್ತರು ಈಚೆಗೆ ಸ್ಥಳೀಯ ಶಾಸಕ ಎ.ವೆಂಕಟೇಶ ನಾಯಕ ಮೂಲಕ ಸಿಎಂ ಗೆ ಮನವಿ ಸಲ್ಲಿಸಿ, 2004ರಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿತ್ತು. 2012ರಲ್ಲಿ ಜಸ್ಟೀಸ್ ಎ.ಜೆ. ಸದಾಶಿವ ಅವರ ಆಯೋಗ ವರದಿ ಸಲ್ಲಿಸಿದೆ. ಆದರೆ ಅದರ ಜಾರಿ ವಿಳಂಬವಾಗಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ  ಖಾಲಿ ಇರುವ ಸಾವಿರಾರು ಬ್ಯಾಕಲಾಗ್ ಹುದ್ದೆ ಭರ್ತಿ ಮಾಡಬೇಕು. ರಾಜ್ಯದಲ್ಲಿ ಮಹಾನಗರಪಾಲಿಕೆ, ನಗರಸಭೆ ಹಾಗೂ ಪುರಸಭೆಗಳಲ್ಲಿ ಕಳೆದ 15 ವರ್ಷಗಳಿಂದ ಕಾಯಂ ಸ್ವರೂಪದ ಕೆಲಸವನ್ನು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ಶಿವಪ್ಪ ಬಲ್ಲಿದ್, ಮಲ್ಲಯ್ಯ ಕಟ್ಟಿಮನಿ, ಎನ್.ಲಿಂಗಪ್ಪ ಜಾಲಹಳ್ಳಿ, ಶಿವಪ್ಪ ಭಾವಿಮನಿ, ಬಸಲಿಂಗಪ್ಪ ನಾಗವಂಶಿ, ರಮೇಶ ಭಂಡಾರಿ, ಭೀಮರಾಯ ಭಂಡಾರಿ, ಸದಾಶಿವ ಗೋಪಾಳಪುರ, ಮಲ್ಲಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement