ಜಿಲ್ಲಾದ್ಯಂತ ಜಿಟಿ ಜಿಟಿ ಮಳೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.10
ಕಳೆದ ಬುಧವಾರದಿಂದೀಚೆಗೆ ಜಿಲ್ಲೆಯ ಬಹುತೇಕ ಎಲ್ಲೆಡೆ ಮಳೆಯಾಗಿದ್ದು, ಅತೀ ಹೆಚ್ಚಿನ ಮಳೆ ಮಾನವಿ ತಾಲೂಕಿನ ರಾಜಲಬಂಡಾದಲ್ಲಿ 46 ಮಿಮೀ.ನಷ್ಟು ಸುರಿದಿದೆ.
ನಗರದಲ್ಲಿ ಸಹ ಬುಧವಾರ ದಿನವಿಡೀ ಸುರಿದ ಮಳೆ ರಾತ್ರಿಯೂ ಮುಂದುವರಿಯಿತು. ಗುರುವಾರ ಬೆಳಗ್ಗೆಯಿಂದಲೇ ಮಳೆ ಸುರಿಯಿತು. ಇದರಿಂದಾಗಿ ನಗರದ ರಸ್ತೆಗಳಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಬಿಡದೆ ಸುರಿಯತೊಡಗಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.
ನಗರದಲ್ಲಿ ಬುಧವಾರದಿಂದ ಗುರುವಾರ ಬೆಳಗ್ಗೆವರೆಗೆ ಒಟ್ಟು 23.5 ಮಿಮೀ ಮಳೆಯಾಗಿದೆ. ರಾಯಚೂರು ತಾಲೂಕಿನ ಯರಮರಸ್ನಲ್ಲಿ 18.5 ಮಿಮೀ, ಯರಗೇರಾ- 22 ಮಿಮೀ, ಗಿಲ್ಲೆಸೂಗೂರು- 21 ಮಿಮೀ, ಕಲ್ಮಲಾ-27 ಮಿಮೀ, ಜೇಗರಕಲ್- 16.2 ಮಿಮೀ, ದೇವಸೂಗೂರು- 8.6 ಮಿಮೀ, ಚಂದ್ರಬಂಡಾ- 6 ಮಿಮೀ ಮಳೆಯಾಗಿದೆ.
ಮಾನವಿ ಪಟ್ಟಣದಲ್ಲಿ 27 ಮಿಮೀ, ಕುರ್ಡಿ- 24 ಮಿಮೀ, ಕಲ್ಲೂರು- 22 ಮಿಮೀ, ಸಿರವಾರ- 26 ಮಿಮೀ, ಮಲ್ಲಟ- 19 ಮಿಮೀ, ಕುರುಕುಂದಾ- 24 ಮಿಮೀ, ಕವಿತಾಳ- 18 ಮಿಮೀ, ಪಾಮನಕಲ್ಲೂರು- 5.4 ಮಿಮೀ, ರಾಜಲಬಂಡಾ- 46 ಮಿಮೀ, ಹಾಲಾಪುರ- 6 ಮಿಮೀ ಮಳೆಯಾಗಿದೆ.
ದೇವದುರ್ಗ ಪಟ್ಟಣದಲ್ಲಿ 11 ಮಿಮೀ, ಅರಕೇರಾ- 23.4 ಮಿಮೀ, ಗಬ್ಬೂರು- 21 ಮಿಮೀ, ಗಲಗ- 13.2 ಮಿಮೀ, ಜಾಲಹಳ್ಳಿಯಲ್ಲಿ 8.3 ಮಿಮೀ ಮಳೆಯಾಗಿದೆ.
ಲಿಂಗಸ್ಗೂರು ತಾಲೂಕಿನ ಲಿಂಗಸ್ಗೂರು ಪಟ್ಟಣದಲ್ಲಿ 6 ಮಿಮೀ, ಹಟ್ಟಿ- 15 ಮಿಮೀ, ಮಸ್ಕಿ- 9.6 ಮಿಮೀ ಹಾಗೂ ಮುದಗಲ್ನಲ್ಲಿ 37.2 ಮಿಮೀ ಮಳೆಯಾಗಿದೆ.
ಸಿಂಧನೂರು ನಗರದಲ್ಲಿ 9.2 ಮಿಮೀ, ಜವಳಗೇರಾ- 16.8 ಮಿಮೀ, ಸಾಲಗುಂದಾ- 10.6 ಮಿಮೀ, ಬಳಗಾನೂರು- 7 ಮಿಮೀ, ಗುಡದೂರು- 15.3 ಮಿಮೀ, ತುರ್ವಿಹಾಳ- 5 ಮಿಮೀ, ವಲ್ಕಂದಿನ್ನಿ- 16.2 ಮಿಮೀ, ಗುಂಜಳ್ಳಿ- 8.2 ಮಿಮೀ, ಜಾಲಿಹಾಳ- 9.2 ಮಿಮೀ, ಹೆಡಗಿನಾಳ- 22.4 ಮಿಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.