ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮನುಜಮತ ಬಳಗದಿಂದ ದೇಣಿಗೆ ಚೆಕ್

Lingaraj Badiger
Updated On : 12 Jul 2013, 11:04 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.10
ಉತ್ತರಾಖಂಡದಲ್ಲಿ ಪ್ರವಾಹ ಪೀಡಿತರಿಗಾಗಿ ಮನುಜಮತ ಬಳಗದಿಂದ ಸಂಗ್ರಹಿಸಿದ ದೇಣಿಗೆ ಚೆಕ್‌ಗಳನ್ನು ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ ಅವರ ಮೂಲಕ ಪ್ರಧಾನಿ ಮಂತ್ರಿಗಳ ಪರಿಹಾರ ನಿಧಿಗೆ ರವಾನಿಸಲಾಯಿತು.
ಈ ವೇಳೆ ಮಾತನಾಡಿದ ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್. ಕಂಬಳಿ, ಸರ್ಕಾರದ ಆದೇಶದಂತೆ ನಗದು ಸಂಗ್ರಹವನ್ನು ಕೈಬಿಟ್ಟಿದ್ದೇವೆ. ಪ್ರವಾಹ ಪೀಡಿತರಿಗಾಗಿ ದಾನಿಗಳಿಂದ ಚೆಕ್‌ಗಳನ್ನು ಸ್ವೀಕರಿಸಿ,  ರು. 18 ಸಾವಿರ  ರವಾನೆ ಮಾಡಲಾಗುತ್ತಿದೆ. ಸಂಘದಿಂದ ಕೈಲಾದಷ್ಟು ಸಹಾಯ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸಹ ಮಾನವೀಯತೆ ದೃಷ್ಟಿಯಿಂದ ನೆರೆಪೀಡಿತರಿಗೆ ಸಹಾಯಹಸ್ತ ಚಾಚಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮನುಜಮತ ಬಳಗದ ಕಾರ್ಯದರ್ಶಿ ಬಸವರಾಜ ಬಾದರ್ಲಿ, ಸದಸ್ಯರಾದ ಶಕುಂತಲಾ ನಾಗರೆಡ್ಡಿ, ವೆಂಕನಗೌಡ ಗದ್ರಟಗಿ, ಬಿ.ಕೊಟ್ರೇಶ, ಸುಭಾನ್, ರಾಮಣ್ಣ ಹಿರೇಬೇರ್ಗಿ, ವಿರುಪಣ್ಣ ದೇವರಗುಡಿ, ಪಂಪಯ್ಯಸ್ವಾಮಿ ಅಂತರಗಂಗಿ, ಗುಂಡಪ್ಪ ಬಳಿಗಾರ, ಶಿವಣ್ಣ ಹ.ಸಣ್ಣಪ್ಪನವರ, ನಿರುಪಾದೆಪ್ಪ ವಕೀಲ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement