ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಆಧಾರ್‌'ಗೆ ಹಣ ವಸೂಲಿ; ಕರವೇ ಆರೋಪ

Lingaraj Badiger
Updated On : 15 Jul 2013, 11:15 am

ರಾಯಚೂರು: ಜಿಲ್ಲೆಯ ಪ್ರತಿ ತಾಲೂಕಿಗೆ ಕೇವಲ ಒಂದು ಕಂಪ್ಯೂಟರ್ ಅಳವಡಿಸಿ ಆಧಾರ್ ಕಾರ್ಡ್ ಮಾಡಿ ಕೊಡಲು ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಜೈ ಕನ್ನಡ ವೇದಿಕೆ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರಿಗೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸಲು ವಿಶೇಷ ಗುರುತಿನ ಚೀಟಿಯನ್ನು ಗಣಕೀಕರಣದ ಮೂಲಕ ಆಧಾರ್ಕಾರ್ಡ ನೀಡಲು ಸರ್ಕಾರದ ಒಪ್ಪಂದದ ಪ್ರಕಾರ ಹೈದ್ರಾಬಾದನ ಶ್ರೀವೇಣಿ ಕಂಪ್ಯೂಟರ್ಸ್ ಏಜೆನ್ಸಿ ಅವರು ಜಿಲ್ಲೆಯ ಪ್ರತಿ ತಾಲೂಕಿಗೆ 200 ಕಂಪ್ಯೂಟರ್‌ನಂತೆ ಶಾಖೆ ಒದಗಿಸದೆ ಕೇವಲ ಒಂದು ಕಂಪ್ಯೂಟರ್ ಅಳವಡಿಸುವ ಮೂಲಕ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ತಾಲೂಕಿನ ಎಲ್ಲ ಹಳ್ಳಿಗಳ ಜನತೆ ರಾಯಚೂರು ನಗರಕ್ಕೆ ಬಂದು ದಿನವಿಡಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಅಲ್ಲದೆ ಪ್ರತಿಯೊಬ್ಬರಿಂದ ರು. 50 ರಿಂದ 100 ವಸೂಲಿ ಮಾಡಲಾಗುತ್ತಿದೆ.
ಕೂಡಲೆ ಸದರಿ ಏಜೆನ್ಸಿಯಿಂದ ಪರವಾನಗಿ ರದ್ದುಪಡಿಸಬೇಕು ಅಥವಾ ಸರ್ಕಾರದ ನಿಯಮದಂತೆ ಪ್ರತಿ ತಾಲೂಕಿಗೆ 200 ಶಾಖೆಗಳನ್ನು ತೆರೆದು ವ್ಯವಸ್ಥಿತವಾಗಿ ಉಚಿತ ಸೇವೆ ಸೌಲಭ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜೈ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎನ್. ಶರಣಪ್ಪ, ಜಿಲ್ಲಾಧ್ಯಕ್ಷ ಟಿ. ನರಸಪ್ಪ, ಮುಖಂಡರಾದ ವೆಂಕಟಸ್ವಾಮಿ, ಉರುಕುಂದಿ, ಈಶ್ವರ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement