ಎಡದಂಡೆ ಕಾಲುವೆಗೆ ಬೋಂಗಾ
ರಾಯಚೂರು: ಮಾನವಿ ತಾಲೂಕಿನ ಹಾಲಾಪುರ ಮತ್ತು ಗೂಗೇಬಾಳ ಮಧ್ಯೆ ತುಂಗಭದ್ರಾ ಎಡದಂಡೆ ಕಾಲುವೆಯ 84ನೇ ಮೈಲ್ನಲ್ಲಿ ಕಾಲುವೆಗೆ ಭಾನುವಾರ ಬೆಳಗ್ಗೆ ಬೋಂಗಾ (ರಂಧ್ರ) ಉಂಟಾಗಿ ನೀರು ಪೋಲಾಗಿದೆ.
ಈ ಗ್ರಾಮಗಳ ಬಳಿ ಕಾಲುವೆಯ ಆಧುನೀಕರಣ ಕಾಮಗಾರಿ ಜಾರಿಯಲ್ಲಿದ್ದು, ಇದೇ ವೇಳೆ ಕಾಲುವೆಯಲ್ಲಿ ನೀರು ಹರಿಬಿಟ್ಟಿದ್ದರಿಂದ ನೀರು ಕಾಲುವೆಯಲ್ಲಿ ಉಂಟಾದ ರಂಧ್ರ ಉಂಟಾಗಿ ನೀರು ಹೊರಹರಿದಿದೆ. ಕಾಲುವೆಯ ಅಕ್ಕಪಕ್ಕದ ಗದ್ದೆಗಳಲ್ಲಿ ಸದ್ಯ ಬೆಳೆಯಿಲ್ಲ ಆದ್ದರಿಂದ ಭಾರೀ ಹಾನಿ ತಪ್ಪಿತು.
ಕಾಲುವೆ ಸ್ಥಳದಲ್ಲಿದ್ದ ಆಧುನೀಕರಣ ಕಾಮಗಾರಿ ಹೊಣೆ ಹೊತ್ತ ಗುತ್ತಿಗೆದಾರರು ಹಾಗೂ ನೀರಾವರಿ ಎಂಜಿನಿಯರ್ಗಳು ಕಾಲುವೆಗೆ ಉಂಟಾಗಿರುವ ರಂಧ್ರವನ್ನು ಮುಚ್ಚುವ ಕಾರ್ಯ ಆರಂಭಿಸಿದ್ದಾರೆ.