ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಡಿತರ ಚೀಟಿ ಪ್ರಕ್ರಿಯೆ: ಸಂಘಟನೆ ಮನವಿ

Lingaraj Badiger
Updated On : 16 Jul 2013, 11:03 am

ಮಸ್ಕಿ: ಪಟ್ಟಣದಲ್ಲಿ ಜಾರಿಯಲ್ಲಿರುವ ಪಡಿತರ ಚೀಟಿ ಭಾವಚಿತ್ರ ನೋಂದಣಿ ಪ್ರಕ್ರಿಯೆಯಿಂದ ಜನತೆಗೆ ತೊಂದರೆಯಾಗಿದ್ದು, ಪ್ರಕ್ರಿಯೆ ಸರಳಗೊಳಿಸಲು ಹೆಚ್ಚು ಕೇಂದ್ರ ತೆರೆಯಲು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
 ಈ ಕುರಿತು ಸಹಾಯಕ ಆಯುಕ್ತ ಯೋಗೀಶ್ ಅವರಿಗೆ ಮನವಿ ಸಲ್ಲಿಸಿದ ಸಂಘಟನೆ ಕಾರ್ಯಕರ್ತರು, ಪಡಿತರ ಚೀಟಿಗಾಗಿ ಕಳೆದ ಅನೇಕ ದಿನಗಳಿಂದ ಕೂಲಿಕಾರ್ಮಿಕರು ಹಾಗೂ ಜನತೆ ತಮ್ಮ ವೈಯಕ್ತಿಕ ಕೆಲಸ ಬಿಟ್ಟು ಕೇಂದ್ರಗಳ ಮುಂದೆ ಪಡಿತರ ಚೀಟಿ ನೋಂದಣಿಗೆ ಕಾದು ನಿಲ್ಲುವಂತಾಗಿದೆ. ಕಡಿಮೆ ಸಂಖ್ಯೆಯ ಕೇಂದ್ರಗಳ ಸ್ಥಾಪನೆಯಿಂದ ಪ್ರಕ್ರಿಯೆ ನಿಧಾನ ಗತಿಯಲ್ಲಿ ಸಾಗಿದ್ದು, ಈ ಬಗ್ಗೆ ದೂರಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿದರು. ಕೂಡಲೇ ಪಟ್ಟಣದಲ್ಲಿ ಹೆಚ್ಚುವರಿ ನೋಂದಣಿ ಕೇಂದ್ರಗಳನ್ನು ತೆರೆದು ಸಮಸ್ಯೆಯನ್ನು ಪರಿಹರಿಸಬೇಕು.ತಪ್ಪಿದಲ್ಲಿ ಉಗ್ರ  ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಂಘಟನೆಯ ಅಧ್ಯಕ್ಷ ಯಮನೂರ ಒಡೆಯರ್, ಕಿರಣ ಮುರಾರಿ, ಸಿದ್ದು ಮುರಾರಿ, ಬಸವರಾಜ ಕೆಳಗೇರಿ, ಖಾದರಬಿ ಬಳಿಗಾರ, ಗೌರಮ್ಮ, ಶಾರದಮ್ಮ, ಯಲ್ಲಮ್ಮ, ಶಿವಯ್ಯ, ಮಲ್ಲಮ್ಮ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement