20ರಿಂದ ಎರಡು ದಿನಗಳ ಉಚಿತ ಕಾರ್ಯಾಗಾರ
ರಾಯಚೂರು: ನಗರದಲ್ಲಿ ಜು.20 ಮತ್ತು 21ರಂದು ಕೆಎಎಸ್, ಐಎಎಸ್, ಪಿಎಸ್ಐ, ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹುದ್ದೆ ಪರೀಕ್ಷೆ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗುವಂತೆ ಎರಡು ದಿನಗಳ ಉಚಿತ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.
ಸ್ಪರ್ಧಾ ವಿಜೇತ ಕೆಎಎಸ್, ಐಎಎಸ್ ಕೆರಿಯರ್ ಅಕಾಡೆಮಿ ನಿರ್ದೇಶಕ ಡಾ.ಕೆ. ಎಂ. ಸುರೇಶ್ ಅವರ ವತಿಯಿಂದ ನಗರದ ರಂಗಮಂದಿರದಲ್ಲಿ ಅಂದು ಬೆಳಗ್ಗೆ 10.30ರಿಂದ ಸ್ಪರ್ಧಾರ್ಥಿಗಳಿಗೆ ಉಚಿತ ತರಬೇತಿ ಆಯೋಜಿಸಿದ್ದು, ಕಾರ್ಯಾಗಾರದ ಪ್ರಯೋಜನ ಪಡೆಯಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9845419561 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.