31ರಂದು ಕೊಪ್ಪಳದಲ್ಲಿ ವಾಯುಪಡೆ ರ್ಯಾಲಿ
ರಾಯಚೂರು: ಭಾರತೀಯ ವಾಯುಪಡೆಯು ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ರ್ಯಾಲಿಯನ್ನು ಕೊಪ್ಪಳದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜು.31ರಂದು ಆಯೋಜಿಸಲಾಗಿದೆ.
1993ರ ಮೇ 1ರಿಂದ 1996ರ ನ.30ರೊಳಗೆ ಜನಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ದ್ವಿತೀಯ ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಶೇ.50ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತಿರ್ಣರಾಗಿರಬೇಕು.
ಇಂಗ್ಲಿಷ್ ವಿಷಯದಲ್ಲಿ 50ಕ್ಕಿಂತ ಹೆಚ್ಚಿನ ಅಂಕ ಗಳಿಸಿದವರಾಗಿರಬೇಕು. ಮೂರು ವರ್ಷಗಳ ಡಿಪ್ಲೊಮಾ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೋಬೈಲ್, ಕಂಪ್ಯೂಟರ್ ಸೈನ್ಸ್, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ, ಇನ್ಫರ್ಮೇಷನ್ ಟೆಕ್ನಾಲಜಿ ಭಾಗಗಳಲ್ಲಿ ಶೇ.50 ಅಂಕಗಳೊಂದಿಗೆ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಬಹುದು. ಅರ್ಹರು ಎಲ್ಲ ದಾಖಲೆಗಳೊಂದಿಗೆ ಅವುಗಳ ಮೂರು ಜೆರಾಕ್ಸ್ ಪ್ರತಿ ಹಾಗೂ ಈಚಿನ 7 ಬಣ್ಣದ ಭಾವಚಿತ್ರಗಳೊಂದಿಗೆ ರ್ಯಾಲಿಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಢಿಢಿಢಿ.್ಝಟಿಜ್ಝಛಟಿಛ್ಝ್ಠಜ್ಟ್ಠ್ಛಿಜ.ಟ್ಝ್ಛಿ ಸಂಪರ್ಕಿಸಲು ಕೋರಲಾಗಿದೆ.