ಮಳೆಯಲ್ಲೂ ನಿಲ್ಲದ ಶೋಭಾಯಾತ್ರೆ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.16
ಸಿಂಧನೂರಿನಲ್ಲಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ನಿಂದ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಅಂಗವಾಗಿ ಮಂಗಳವಾರ ಲಿಂಗಸ್ಗೂರಿನಿಂದ ಆಗಮಿಸಿದ ಸ್ವಾಮಿ ವಿವೇಕಾನಂದರ ರಥಯಾತ್ರೆಯನ್ನು ಸ್ವಾಗತ ಸಮಿತಿ ಬಳಗವು ಅದ್ಧೂರಿಯಾಗಿ ಸ್ವಾಗತಿಸಿತು.
ಮೆರವಣಿಗೆ ಮಹಾವೀರ ರಸ್ತೆಯಲ್ಲಿ ಹೋಗುವಾಗ ಮಳೆ ಸುರಿದರೂ ಸಹ ಲೆಕ್ಕಿಸದೆ ಮೆರವಣಿಗೆ ಮುಂದೆ ನಡೆಯಿತು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಕಾರ್ಯಾಧ್ಯಕ್ಷ ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಈರೇಶ ಇಲ್ಲೂರು, ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ ಮತ್ತಿತರರು ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ನಗರಸಭೆ ಮೈದಾನದಿಂದ ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಮಹಾವೀರ ರಸ್ತೆ, ರಾಣಿ ಚೆನ್ನಮ್ಮ ವೃತ್ತದ ಮೂಲಕ ಕನ್ನಿಕಾ ಪರಮೇಶ್ವರ ದೇವಸ್ಥಾನದವರೆಗೆ ಅದ್ಧೂರಿಯಾಗಿ ನಡೆಯಿತು.
ಮೆರವಣಿಗೆಯಲ್ಲಿ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ, ನಗರಸಭೆ ಸದಸ್ಯರಾದ ಬಸವರಾಜ ನಾಡಗೌಡ, ಚಂದ್ರು ಮೈಲಾರ, ಶರಣಬಸವ, ನಗರಸಭೆ ಪೌರಯುಕ್ತ ನಾಸೀರ್ ಅಲಿ, ಬಿಜೆಪಿ ತಾಲೂಕಾಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ, ಬಿಜೆಪಿ ಮಾಜಿ ತಾಲೂಕಾಧ್ಯಕ್ಷ ಅಮರೇಗೌಡ ವಿರುಪಾಪುರ, ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ, ಜಿಲ್ಲಾ ಚುಟುಕು ಸಾಹಿತ್ಯ ಅಧ್ಯಕ್ಷ ಭೀರಪ್ಪ ಶಂಭೋಜಿ, ಮುಖಂಡರಾದ ಶಿವಕುಮಾರ ಜವಳಿ, ಬಸವರಾಜ ಬಂಗಾರಶೆಟ್ಟರ್, ವೈ. ನರೇಂದ್ರನಾಥ, ನಡುವಿ ಕೃಷ್ಣಮೂರ್ತಿ, ಕೆ. ಸತ್ಯನಾರಾಯಣ ಶೆಟ್ಟಿ, ಎನ್.ಮಲ್ಲಯ್ಯ ಶೆಟ್ಟಿ, ಶರಣೇಗೌಡ ವಿರುಪಾಪೂರ, ಧರಯ್ಯ, ಅಜಿತ್ ಓಸ್ತವಾಲ, ಸುಮಿತ್ ತಡಕಲ್, ಚಂದ್ರಕಲಾ ಪ್ರಕಾಶ, ಗುಂಡಪ್ಪ ಸಾಲುಗುಂದ, ನಾಗರಾಜ ಮಾಡಶಿರವಾರ ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.