ವಿವಿಧ ತರಬೇತಿಗೆ ಅರ್ಜಿ
ರಾಯಚೂರು: ಮಾನವಿ ಪುರಸಭೆಯಲ್ಲಿ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆಯ ಸ್ಟೆಪ್ ಆಪ್ ಕಾರ್ಯಕ್ರಮದಡಿ ಬಡತನರೇಖೆ ಗಿಂತ ಕೆಳಗಿರುವವರಿಂದ ಅರ್ಜಿ ಕರೆಯಲಾಗಿದೆ.
2012-13 ಹಾಗೂ 2013-14ನೇ ಸಾಲಿಗೆ ಪುರಸಭೆ ವ್ಯಾಪ್ತಿಗೊಳಪಟ್ಟ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 18ರಿಂದ 35ವರ್ಷದ ವಯೋವುತಿ ಹೊಂದಿರುವ 10ನೇ ತರಗತಿ, ಪಿಯುಸಿ ಪಾಸ್, ಫೇಲ್ ಆದವರೂ ಅರ್ಜಿ ಸಲ್ಲಿಸಬಹುದು.
ಒಟ್ಟು 145ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಇದರಲ್ಲಿ ಎಸ್ಸಿ, ಎಸ್ಟಿ, ಅಲ್ಪ ಸಂಖ್ಯಾತರು, ಇತರೆ, ಮಹಿಳೆಯರು, ಅಂಗವಿಕಲರು ವಿವಿಧ ತರಬೇತಿ ಕೋರ್ಸ್‌ಗಳನ್ನು ಉಚಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಮಾನವಿ ಪುರಸಭೆ ಕಾರ್ಯಾಲಯದಿಂದ ಉಚಿತವಾಗಿ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜು.30ರೊಳಗೆ ಸಲ್ಲಿಸಲು ತಿಳಿಸಿದೆ.