ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಚುನಾವಣೆ; ಹಾಲಿ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಆಯ್ಕೆ

Lingaraj Badiger
Updated On : 18 Jul 2013, 11:09 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.17
ಸರ್ಕಾರಿ ನೌಕರರ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಸೇರಿದಂತೆ 23 ಜನ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ತಾಲೂಕಾ ನೌಕರರ ಸಂಘದ 23 ಇಲಾಖೆಗಳ 35 ಸ್ಥಾನಗಳಲ್ಲಿ 59 ಜನ ನಾಮಪತ್ರ ಸಲ್ಲಿಸಿದ್ದು, 23 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ನಾಮಪತ್ರ ಹಿಂದೆ ಪಡೆಯಲು ಕೊನೆಯ ದಿನವಾಗಿತ್ತು. ಪ್ರಾಥಮಿಕ ಶಾಲಾ, ಪ್ರೌಢಶಾಲಾ, ಆರೋಗ್ಯ, ಕಂದಾಯ ಇಲಾಖೆಗಳ 12 ಸ್ಥಾನಗಳಿಗೆ 27 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲೂ ಪ್ರಾಥಮಿಕ ಶಾಲಾ ವಿಭಾಗದ 4 ಸ್ಥಾನಗಳಿಗೆ 14 ಜನ ಕಣದಲ್ಲಿರುವುದು ವಿಶೇಷ. ಇದರಲ್ಲಿ ಎ.ಬಿ. ಪಾಟೀಲ್, ರಾಜೇಂದ್ರ, ಸಂಗಯ್ಯ ಸ್ವಾಮಿ, ಬಸವರಾಜ. ವಿ ಒಟ್ಟು ಮೂರು ಪ್ಯಾನಲ್‌ಗಳಿದ್ದು, ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಜು.22 ರಂದು ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಆ-1 ರಂದು ತಾಲೂಕಾ ಸಮಿತಿಗೆ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಅವಿರೋಧ ಆಯ್ಕೆಯಾದವರು: ಸರ್ಕಾರಿ ನೌಕರರ ಸಂಘದ ನಿರ್ದೇಶಕರಾಗಿ ಹಾಲಿ ಅಧ್ಯಕ್ಷ ಚಂದ್ರಶೇಖರ ಹಿರೇಮಠ(ಲಿಪಿಕ), ಎಂ.ಎಸ್. ಚಂದಾವರಿ(ಕೃಷಿ), ದೀಲೀಪ್ ಕುಮಾರ(ಪಶು ಸಂಗೋಪನಾ), ಡಾ. ಶಶಿಧರ ಸೊಪ್ಪಿಮಠ(ಪಶು ಸಂಗೋಪನಾ), ಮಹ್ಮದ್ ನೂರ ಅಲಿ(ವಾಣಿಜ್ಯ), ಬಸವರಾಜ (ಆಹಾರ), ಶಿವಕುಮಾರ(ನೀರಾವರಿ), ಶರಣಪ್ಪ(ನೀರಾವರಿ), ಜಗದೀಶ ಓತೂರು(ಪ.ಪೂ.ಕಾಲೇಜು), ಬಸವರಾಜ ತಡಕಲ್(ಪದವಿ ಕಾಲೇಜು), ರಮೇಶ(ಸಮಾಜ ಕಲ್ಯಾಣ), ಎಂ. ಮಹ್ಮದ್ ಅಲಿ (ಬಿಸಿಎಂ), ಬಾಲಯ್ಯ (ಅರಣ್ಯ), ಶಶಿಕಾಂತ ರಜಪೂತ(ಕಾನೂನು ಮಾಪನ), ಮಹ್ಮದ್ ಸಾಧಿಕ ಹುಸೇನ್(ಅಬಕಾರಿ), ಅಮರಯ್ಯ(ರೇಷ್ಮೆ), ಹನುಮಂತಪ್ಪ(ಖಜಾನೆ), ಶಾಂತಪ್ಪ ಅಗಸಬಾಳ(ಸರ್ವೇ), ನಾಗಪ್ಪ(ಎಪಿಎಂಸಿ), ರಮೇಶ(ನ್ಯಾಯಾಂಗ), ಲಿಂಗಪ್ಪ(ತಾ.ಪಂ), ಲಿಂಗನಗೌಡ ನಾಗರಾಜಗೌಡ(ಸಿಡಿಪಿಓ) ಹಾಗೂ ಗುರುಪ್ರಸಾದ ಹಿರೇಮಠ(ಸಹಕಾರ) ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement