ಜಿಲ್ಲಾದ್ಯಂತ ಮಳೆ: ಗಬ್ಬೂರಿನಲ್ಲಿ ಆರ್ಭಟ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.17
ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಕಡೆ ಮಂಗಳವಾರದಿಂದ ಈಚೇಗೆ ಮಳೆ ಸುರಿದಿದ್ದು, ಅತೀ ಹೆಚ್ಚು ಮಳೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ 37 ಮಿಮೀ ಸುರಿದಿದೆ.
ನಗರದಲ್ಲಿ ಮಂಗಳವಾರ ರಾತ್ರಿಯೂ 28ಮಿಮೀ ಮಳೆ ಬಿದ್ದಿದೆ. ತಾಲೂಕಿನ ಯರಮರಸ್ನಲ್ಲಿ 27.8 ಮಿಮೀ, ಯರಗೇರಾ-7ಮಿಮೀ, ಗಿಲ್ಲೆಸೂಗೂರು- 10ಮಿಮೀ, ಕಲ್ಮಲಾ- 14ಮಿಮೀ, ಜೇಗರಕಲ್-20.1ಮಿಮೀ, ಗಾಜರಾಳ- 8.4ಮಿಮೀ, ದೇವಸೂಗೂರು- 15ಮಿಮೀ, ಚಂದ್ರಬಂಡಾ- 28ಮಿಮೀ ಮಳೆಯಾಗಿದೆ.
ಮಾನವಿಯಲ್ಲಿ 6ಮಿಮೀ, ಅದೇ ತಾಲೂಕಿನ ಕಲ್ಲೂರು-7ಮಿಮೀ, ಸಿರವಾರ-4.2ಮಿಮೀ, ಕುರುಕುಂದಾ 9ಮಿಮೀ, ರಾಜಲಬಂಡಾ- 8ಮಿಮೀ ಮಳೆಯಾಗಿದೆ.
ದೇವದುರ್ಗದಲ್ಲಿ 21ಮಿಮೀ, ಅದೇ ತಾಲೂಕಿನ ಅರಕೇರಾ- 6.4 ಮಿಮೀ, ಗಬ್ಬೂರು-37 ಮಿಮೀ, ಜಾಲಹಳ್ಳಿ- 8ಮಿಮೀ ಮಳೆಯಾಗಿದೆ. ಲಿಂಗಸ್ಗೂರುನಲ್ಲಿ 1ಮಿಮೀ, ಅದೇ ತಾಲೂಕಿನ ಹಟ್ಟಿ- 4ಮಿಮೀ, ಮಸ್ಕಿ- 6.6ಮಿಮೀ ಮತ್ತು ಮುದಗಲ್- 10ಮಿಮೀ ಮಳೆ ಬಿದ್ದಿದೆ.
ಸಿಂಧನೂರುನಲ್ಲಿ 3ಮಿಮೀ, ಜವಳಗೇರಾ- 13.4ಮಿಮೀ, ಸಾಲಗುಂದಾ- 16.4ಮಿಮೀ, ಬಳಗಾನೂರು- 7ಮಿಮೀ, ಗುಡದೂರು- 5.3ಮಿಮೀ, ತುರ್ವಿಹಾಳ- 2ಮಿಮೀ, ವಲ್ಕಂದಿನ್ನಿ- 8.2 ಮಿಮೀ, ಗುಂಜಳ್ಳಿ-6.4 ಮಿಮೀ ಹಾಗೂ ಜಾಲಿಹಾಳದಲ್ಲಿ 4.5 ಮಿಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.