ನೌಕರರ ಸಂಘದ ಚುನಾವಣೆ; ಕಣದಲ್ಲಿ 11 ಜನ, 49 ಜನರ ಅವಿರೋಧ ಆಯ್ಕೆ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.17
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ. ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹಾಲಿ ಅಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ ಸೇರಿ ವಿವಿಧ ಇಲಾಖೆಗಳ 49 ಜನ ನೌಕರರು ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಸಂಘದ ಚುನಾವಣೆಯ ಚುನಾವಣಾಧಿಕಾರಿ ಹುಸೇನಪ್ಪ ಅವರು, ಒಟ್ಟು 62 ಜನ ಸದಸ್ಯ ಬಲದ ಸಮಿತಿಗೆ ಸದ್ಯ ಕಣದಲ್ಲಿ 11 ಜನ ಉಳಿದಿದ್ದಾರೆ. 49 ಜನ ಅವಿರೋಧ ಆಯ್ಕೆಯಾಗಿದ್ದಾರೆಂದು ತಿಳಿಸಿದ್ದಾರೆ.
ಪ್ರಾಥಮಿಕ ಶಾಲೆಗಳ ಕ್ಷೇತ್ರದಿಂದ ಮಹಾಂತೇಶ್, ಇಸ್ಮಾಯಿಲ್, ವಿನೋದಕುಮಾರ್, ವೀರಭದ್ರಪ್ಪ, ಹನುಮಂತ ರಾಯ, ಮಾರುತಿ, ಬಂದೇನವಾಜ್, ನರಸಿಂಹಲು ಹಾಗೂ ಪ್ರೌಢಶಾಲೆಗಳ ಕ್ಷೇತ್ರದಿಂದ ಅಕ್ಕಮಹಾದೇವಿ, ರಾಜಕುಮಾರ್, ಶಶಿಕಲಾ ದಿವಾಕರ್ ಅವರು ಕಣದಲ್ಲಿದ್ದಾರೆಂದು ತಿಳಿಸಿದ್ದಾರೆ.
ಅವಿರೋಧ ಆಯ್ಕೆಯಾದವರು: ಸಂಘಕ್ಕೆ ಜು.22ರಂದು ಸಂಘದ ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆಗೆ ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಕಡೆಯ ದಿನದ ನಂತರ ಒಟ್ಟು 49ಜನ ಅವಿರೋಧ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಂಘಕ್ಕೆ ಹಾಲಿ ಅಧ್ಯಕ್ಷ ಮಹೆಬೂಬ್ ಪಾಷಾ ಮೂಲಿಮನಿ ಸೇರಿದಂತೆ ಕೃಷಿ ಇಲಾಖೆಯ ಶರಣಬಸವರಾಜ್, ಜಲಾನಯನ ಅಭಿವೃದ್ಧಿ ಇಲಾಖೆಯ ಕೆ.ನಾರಾಯಣಮೂರ್ತಿ, ಪಶುಸಂಗೋಪನೆ ಇಲಾಖೆಯಿಂದ ಸೈಯದ್ ನಜೀರ್ ಅಹ್ಮದ್ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ಅದೇ ರೀತಿ ಕಂದಾಯ (ಅಭಿವೃದ್ಧಿ ಇಲಾಖೆಗಳು ಒಳಗೊಂಡಂತೆ) ಇಲಾಖೆಯಿಂದ ನಾಗರಾಜ್ ಮತ್ತು ಶಕೀಲ್ ಅಹ್ಮದ್, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಪ್ರಕಾಶ್, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸಾಯಿಬಣ್ಣ ಚೂರಿ, ವಾಣಿಜ್ಯ ತೆರಿಗೆ ಇಲಾಖೆಯ ಕೆ. ಗೋಪಾಲ, ಹುಲಿಗೆಪ್ಪ, ಸಹಕಾರ ಇಲಾಖೆಯ ಚಂದ್ರಶೇಖರ್, ಲೋಕೋಪಯೋಗಿ ಇಲಾಖೆ ಮುಜಾಹಿದ್ ಪಾಷಾ, ಜಿಪಂ ಎಂಜಿನಿಯರಿಂಗ್ ವಿಭಾಗದ ಪ್ರಕಾಶ್, ನೀರಾವರಿ ಇಲಾಖೆಯ ಖದೀರ್ ಬೇಗ್, ಜಿಪಂ ನ ಅಬ್ದುಲ್ ವಹೀದ್, ಅಬಕಾರಿ ಇಲಾಖೆಯ ಲಕ್ಷ್ಮಪ್ಪ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯಿಂದ ಎಂ.ಎಸ್.ಗೋನಾಳ,, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶೇಖ್ ಎಂ.ಅಸರಾರ್, ಮೀನುಗಾರಿಕೆ ಇಲಾಖೆಯಿಂದ ಚನ್ನವೀರಪ್ಪ, ಅರಣ್ಯ ಇಲಾಖೆ ಬ್ರಹ್ಮಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎಂ. ಶಂಕ್ರಪ್ಪ, ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಸ್ಪತ್ರೆಗಳು ಇಲಾಖೆಯಿಂದ ಎನ್.ಮಲ್ಲಿಕಾರ್ಜುನ, ಸುರೇಶ್ ಹಳೆಮನಿ, ಜಗದೀಶ್ ಕುಮಾರ್, ಆಯುಷ್ ಮತ್ತು ಇಎಸ್ ಈ ಇಲಾಖೆಯಿಂದ ಸಂಗಮ್ಮ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ವಿವಿಧ ಕ್ಷೇತ್ರಗಳಿಂದ: ಕೈಗಾರಿಕೆ ಮತ್ತು ವಾಣಿಜ್ಯ ಮೆಹಬೂಬ್, ವಾರ್ತಾ ಮತ್ತು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಡಿ ಸಲೀಮ್, ಯುವಜನಸೇವೆ ಮತ್ತು ಸಾರ್ವಜನಿಕ ಗ್ರಂಥಾಲಯದಿಂದ ಗೋವಿಂದಪ್ಪ, ಸರ್ಕಾರಿ ವಿಮಾ ಇಲಾಖೆಯ ಜಾಹೇದ್ ಹುಸೇನ್, ಸರ್ಕಾರಿ ಕಿರಿಯ ಕಾಲೇಜುಗಳಿಂದ ಅಲ್ಲಾಭಕ್ಷ್, ಪದವಿ ಕಾಲೇಜುಗಳಿಂದ ಡಾ.ದಸ್ತಗೀರ್ ಸಾಬ್ ದಿನ್ನಿ, ಮಾರುಕಟ್ಟೆ ಮತ್ತು ಎಪಿಎಂಸಿ ಯಿಂದ ಅಂಜನರೆಡ್ಡಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮಹ್ಮದ್ ಅಲಿ, ಮೋಟಾರು ವಾಹನ ಇಲಾಖೆಯ ಎಂ.ವೆಂಕಟೇಶ್ವರರಾವು, ರೇಷ್ಮೇ ಇಲಾಖೆಯ ಏಜಾಜ್ ಹುಸೇನ್, ರಾಜ್ಯ ಲೆಕ್ಕಪತ್ರ ಇಲಾಖೆ ಕಿಶೋರ್ ಕುಮಾರ್, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಸೈಯದ್ ರಸೂಲ್, ಎನ್ ಸಿಸಿ ಮತ್ತು ಕಾರಾಗೃಹ ಇಲಾಖೆ ಅಬ್ದುಲ್ ಸಮದ್, ಮುದ್ರಾಂಕಗಳ ನೋಂದಣಿ ಮತ್ತು ಸಣ್ಣ ಉಳಿತಾಯ ಇಲಾಖೆಯಿಂದ ಮಹ್ಮದ್ ಹುಸೇನ್, ಖಜಾನೆ ಇಲಾಖೆಯ ವೆಂಕಟಾಚಲ, ಕಾರ್ಮಿಕ, ಕಾರಖಾನೆಗಳು ಮತ್ತು ಬಾಯ್ಲರ್ ಗಳ ಇಲಾಖೆಯ ಮಂಜುನಾಥ್, ನಗರ ಯೋಜನೆ ಮತ್ತು ನಗರಾಭಿವೃದ್ಧಿ ಇಲಾಖೆಯ ಎಂ.ಎ.ಸಲೀಂ, ಧಾರ್ಮಿಕ ದತ್ತಿ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ತರಬೇತಿ ಕೇಂದ್ರದಿಂದ ತ್ರಿವೇಣಿ, ನ್ಯಾಯಾಂಗ ಇಲಾಖೆಯ ನಜೀರ್ ಅಹ್ಮದ್, ಎಸ್.ಎನ್. ರಹೆಮಾನ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್(ತಾಪಂ) ಶರ್ಫುನ್ನಿಸಾ ಬೇಗಂ, ಇನ್ನುಳಿದ ಇಲಾಖೆಗಳಿಂದ ಸಾದಿಕ್ ಖಾನ್, ಬಿ.ಆರ್. ಬೂದಿಹಾಳ್, ಎಂಡಿ ಇದ್ರಿಸ್ ಅವಿರೋಧ ಆಯ್ಕೆಯಾಗಿದ್ದಾರೆಂದು ತಿಳಿಸಿದ್ದಾರೆ.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ಜು.22ರಂದು ಮತದಾನ ನಡೆಯಲಿದ್ದು, ಅದೇ ದಿನ ಸಂದೆ 4.30ರ ನಂತರ ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಮತದಾನಕ್ಕೆ ಆಗಮಿಸುವವರು ತಮ್ಮ ವೇತನ ಜಮಾವಣೆಯಾಗುವ ಬ್ಯಾಂಕ್ ಪಾಸ್ ಪುಸ್ತಕವನ್ನು ಕಡ್ಡಾಯವಾಗಿ ತಮ್ಮೊಂದಿಗೆ ತರುವಂತೆ ಸೂಚಿಸಿದ್ದಾರೆ.