ಪಿಎಸ್ಸೈ ಅಮಾನತು: ಆದೇಶ ರದ್ದತಿಗೆ ಆಗ್ರಹ
ದೇವದುರ್ಗ: ರಾಯಚೂರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್ಸೈ ಬೇಬಿ ವಾಲಿಕಾರ್ ಅವರ ಅಮಾನತು ಆದೇಶ ಹಿಂಪಡೆಯುವಂತೆ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕ ಒತ್ತಾಯಿಸಿದೆ.
ಈ ಕುರಿತು ಬುಧವಾರ ಪಟ್ಟಣದಲ್ಲಿ ತಹಸೀಲ್ದಾರ್ ಮೂಲಕ ಎಸ್ಪಿಗೆ ಮನವಿ ಸಲ್ಲಿಸಿರುವ ಕಾರ್ಯಕರ್ತರು, ದಕ್ಷ ಆಡಳಿತ ನಿರ್ವಹಿಸಿದ್ದ ಪಿಎಸ್ಸೈ ಅವರನ್ನು ಅಮಾನತು ಮಾಡುವುದು ಸರಿಯಲ್ಲ. ಮದ್ಯದ ಅಮಲಿನಲ್ಲಿ ನಾನಾ ರೀತಿಯ ಕಿರುಕುಳಕ್ಕೆ ಕಾರಣವಾಗುವ ವ್ಯಕ್ತಿಗಳಿಗೆ ಪಿಎಸ್ಸೈ ಬೇಬಿ ವಾಲಿಕಾರ್ ಅವರು ತಕ್ಕ ಶಾಸ್ತಿ ಮಾಡಿದ್ದಾರೆ. ಆದರೆ ಪೊಲೀಸ್ ಇಲಾಖೆ ಅವರನ್ನು ಅಮಾನತು ಮಾಡಿ ಜನತೆಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಕೂಡಲೇ ಬೇಬಿ ವಾಲಿಕಾರ್ ಅಮಾನತು ಆದೇಶ ಹಿಂಪಡೆಯಬೇಕೆಂದು ಜಿಲ್ಲಾ ಸಂಚಾಲಕರಾದ ಮರಿಲಿಂಗಪ್ಪ ಕೋಳೂರು, ರಂಗನಾಥ ಕೊಂಬಿನ್, ಬಾಳಪ್ಪ ಎನ್. ಗಣೇಕಲ್, ಆಂಜನೆಯ ಬಡಿಗೇರ, ಎನ್. ಲಿಂಗಪ್ಪ ಜಾಲಹಳ್ಳಿ, ರಂಗನಾಥ ತುಪ್ಪದ, ಬಸವರಾಜ್ ಭವಾನಿ ವಕೀಲರು, ರೆಡ್ಡಿ ತೇಲ್ಕಾರ್ ಮತ್ತಿತರರು ಒತ್ತಾಯಿಸಿದ್ದಾರೆ.
--