ಲಿಂಗಸ್ಗೂರು; 20ರಂದು ಪತ್ರಿಕಾ ದಿನಾಚರಣೆ
ರಾಯಚೂರು: ಲಿಂಗಸ್ಗೂರು ಪ್ರೆಸ್‌ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜು.20ರಂದು ಆಯೋಜಿಸಲಾಗಿದೆ. ಲಿಂಗಸ್ಗೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅಂದು ಬೆಳಗ್ಗೆ 11.30ಕ್ಕೆ ನಡೆಯುವ ಸಮಾರಂಭವನ್ನು ಪರ್ತಕರ್ತ ಗಿರೀಶರಾವ್(ಜೋಗಿ) ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರೆಸ್‌ಕ್ಲಬ್ ಅಧ್ಯಕ್ಷ ಶಿವರಾಜ್ ಕೆಂಭಾವಿ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಎಸ್. ಫಕೀರಪ್ಪ, ಶಾಸಕರಾದ ಮಾನಪ್ಪ ವಜ್ಜಲ್, ಪ್ರತಾಪಗೌಡ ಪಾಟೀಲ್, ವೆಂಕಟೇಶ ನಾಯಕ, ಹಂಪಯ್ಯ ನಾಯಕ, ಡಾ. ಶಿವರಾಜ್ ಪಾಟೀಲ್, ತಿಪ್ಪರಾಜು ಹವಾಲ್ದಾರ್, ಹಂಪನಗೌಡ ಬಾದರ್ಲಿ, ಜಿಪಂ ಅಧ್ಯಕ್ಷೆ ಲಲಿತಮ್ಮ, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಎಸ್ಪಿ ಎಸ್.ಬಿ. ಬಿಸನಳ್ಳಿ ಭಾಗವಹಿಸುವರು. ಸಮಾರಂಭದಲ್ಲಿ ಪತ್ರಕರ್ತ ಮೃತ್ಯುಂಜಯ ಕಪಗಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತದೆ. ಪ್ರೆಸ್‌ಕ್ಲಬ್‌ನ ವಾರ್ಷಿಕ ಪ್ರಶಸ್ತಿಯನ್ನು ಪತ್ರಕರ್ತರಾದ ದತ್ತು ಸರ್ಕಿಲ್, ಖಾಸಿಂ ಅಲಿ ಹಟ್ಟಿ, ಚಂದ್ರಶೇಖರ್ ಬೆನ್ನೂರು, ಮೈನುದ್ದೀನ್ ಕಾಟಮಳ್ಳಿ, ಗಂಗಪ್ಪ ದಿನ್ನಿ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಲಿಂಗಸ್ಗೂರು ಪ್ರೆಸ್‌ಕ್ಲಬ್ ಪ್ರಕಟಣೆ ತಿಳಿಸಿದೆ.
20ರಂದು ಸಂಸ್ಥಾಪನಾ ದಿನಾಚರಣೆ
ರಾಯಚೂರು: ತಾಲೂಕಿನ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 44ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಜು.20ರಂದು ಆಯೋಜಿಸಲಾಗಿದೆ. ಅಂದು ಸಂಜೆ 5.30ಕ್ಕೆ ಶಕ್ತಿನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಸಮಾರಂಭ ಅಧ್ಯಕ್ಷತೆಯನ್ನು ಆರ್‌ಟಿಪಿಎಸ್ ಇಡಿ ಸಿ. ವೇಣುಗೋಪಾಲ್ ವಹಿಸಲಿದ್ದಾರೆ. ವಿಶೇಷ ಆಹಾನ್ವಿತರಾಗಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮುಖ್ಯ ಅಭಿಯಂತರ ಸುದರ್ಶನ್, ನಿವೃತ್ತ ಇಡಿ ಎನ್.ಎಸ್. ಬೇಂದ್ರೆ, ಕೆಪಿಸಿ ಕೇಂದ್ರ ನೌಕರರ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್‌ಟಿಪಿಎಸ್‌ನ ಹಿರಿಯ ಅಧಿಕಾರಿಗಳಾದ ಚಂದ್ರಕಾಂತ, ವೆಂಕಟಾಚಲಪತಿ, ನಾರಾಯಣಸ್ವಾಮಿ, ಡಾ. ಗೋಕುಲ ಆನಂದ್, ಮಹೇಂದ್ರ, ಚಿನ್ನಸೋಮಯ್ಯ, ಪ್ರಭಾಕರ್, ವಿ.ಎಸ್. ಭಾವಿಕಟ್ಟಿ, ಲಚಮಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.