ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಮಯಕ್ಕೆ ಬಾರದ ಬಸ್; ವಿದ್ಯಾರ್ಥಿಗಳ ಪರದಾಟ

Lingaraj Badiger
Updated On : 18 Jul 2013, 11:05 am

ಮುದಗಲ್: ಪಟ್ಟಣದಿಂದ ಲಿಂಗಸ್ಗೂರು ಕಡೆಗೆ ಬೆಳಗ್ಗೆ ವಿದ್ಯಾರ್ಥಿಗಳ ಸಮಯಕ್ಕೆ ಬಸ್ ಸಂಚರಿಸದೇ ಇರುವುದರಿಂದ ಕಾಲೇಜು ವಿದ್ಯಾರ್ಥಿಗಳು ಲಿಂಗಸ್ಗೂರು ಘಟಕದ ಅಧಿಕಾರಿಗಳನ್ನು ಶಪಿಸುವಂತಾಗಿದೆ. ಶಾಲಾ ಕಾಲೇಜಿಗೆ ತೆರಳಲು ತೊಂದರೆ ಪಡುವಂತಾಗಿದೆ.
ಮುದಗಲ್‌ನಿಂದ ಲಿಂಗಸ್ಗೂರು ಪಟ್ಟಣಕ್ಕೆ ತಾಂತ್ರಿಕ ಶಿಕ್ಷಣ, ಕಾಲೇಜು ಶಿಕ್ಷಣಕ್ಕೆ ಬೆಳಗ್ಗೆ ನೂರಾರು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದಾರೆ. ಆ ಎಲ್ಲ ವಿದ್ಯಾರ್ಥಿಗಳು ಎನ್‌ಇಕೆಎಸ್‌ಆರ್‌ಟಿಸಿ ನಿಯಮಾನುಸಾರ ಬಸ್‌ಪಾಸ್ ಹೊಂದಿದ್ದರೂ, 7 ಘಂಟೆಗೆ ಆಗಮಿಸಿದ ಬಸ್‌ಗಳು ಅಂತರರಾಜ್ಯಕ್ಕೆ ತೆರಳುವ ನೆಪದಲ್ಲಿ, ನಿರ್ವಾಹಕನಿಗೆ ಹಣ ಸಂಗ್ರಹವಾಗುವದಿಲ್ಲ ಎನ್ನುವ ನೆಪದಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಗೊಳಿಸದೇ ಲಿಂಗಸ್ಗೂರು ಪಟ್ಟಣಕ್ಕೆ ತೆರಳಿ ಅಲ್ಲಿ ನಿಲ್ಲಿಸುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ.
ಅವ್ಯವಸ್ಥೆ, ತೊಂದರೆ: 7.30ಕ್ಕೆ ಇಳಕಲ್ಲ-ರಾಯಚೂರು ಬಸ್ ಮಾತ್ರ ಇಲ್ಲಿಂದ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಏಕಮೇವ ಬಸ್ ಆಗಿದ್ದರಿಂದ ಎಲ್ಲರೂ ಒಂದೇ ಬಸ್‌ಗೆ ಸಂಚರಿಸಬೇಕಾಗಿರುವುದರಿಂದ ಆ ಬಸ್ಸಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಲಿಂಗಸ್ಗೂರು ಘಟಕಾಧಿಕಾರಿಯಾಗಲಿ, ಸ್ಥಳಿಯ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿಯಾಗಲೀ, ಶಾಲಾ ವಿದ್ಯಾರ್ಥಿಗಳ ಸಮಯಕ್ಕೆ ಬಸ್‌ನ್ನು ಚಲಿಸದೇ ವಿನಾಕಾರಣ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಇನ್ನಾದರೂ ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಸೌಲಭ್ಯ ಕಲ್ಪಿಸುತ್ತಾರೆಯೋ ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement