ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

Lingaraj Badiger
Updated On : 19 Jul 2013, 11:43 am

ಕನ್ನಡಪ್ರಭ ವಾರ್ತೆ, ರಾಯಚೂರು, ಜು.18
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲೆಯ ಪತ್ರಿಕಾ ಕ್ಷೇತ್ರದಲ್ಲಿ ತೋರಿದ ಸಾಧನೆಗೆ ನೀಡುವ ವಾರ್ಷಿಕ ಪ್ರಶಸ್ತಿ ಪ್ರಕಟಿಸಲಾಗಿದೆ.
ಜು.21ರಂದು ನಗರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘ ತಿಳಿಸಿದೆ.
ಸುದ್ದಿಮೂಲ ಪ್ರಾಯೋಜಿತ ದಿ.ಪ್ರಕಾಶ್ ದಿನ್ನಿ ಸ್ಮರಣಾರ್ಥ ಪ್ರಶಸ್ತಿಗೆ ದೇವದುರ್ಗ ತಾಲೂಕಿನ ಅರಕೇರಾದ ಸಂಜೆವಾಣಿ ವರದಿಗಾರ ಬಂದೇನವಾಜ್ ನಾಗಡದಿನ್ನಿ, ಸುದ್ದಿಮೂಲ ಪ್ರಾಯೋಜಿತ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಮಾನವಿ ತಾಲೂಕು ಕವಿತಾಳದ ಬಲವಂತರಾಯ ವಟಗಲ್ ಅವರಿಗೆ ನೀಡಲಾಗುತ್ತದೆ.
ದಿ. ನರಸಿಂಹಾಚಾರ್ಯ ಗುಡಿ ಸ್ಮರಣಾರ್ಥ ಪ್ರಶಸ್ತಿಗೆ ವಿಜಯವಾಣಿ ಜಿಲ್ಲಾ ವರದಿಗಾರ ಶಿವಮೂರ್ತಿ ಹಿರೇಮಠ, ದಿ. ಪ್ರಹ್ಲಾದಾಚಾರ್ಯ ಜೋಷಿ ಸ್ಮರಣಾರ್ಥ ಕೃಷ್ಣ ತುಂಗೆ ಪ್ರಾಯೋಜಿತ ಗ್ರಾಮೀಣ ವರದಿಗಾರಿಕೆಗಾಗಿನ ಪ್ರಶಸ್ತಿಯನ್ನು 'ಕನ್ನಡಪ್ರಭ' ಪತ್ರಿಕೆಯ ಲಿಂಗಸ್ಗೂರು ತಾಲೂಕು ವರದಿಗಾರ ಅಮರೇಶಸ್ವಾಮಿ ಬಲ್ಲಟಗಿ ಅವರಿಗೆ ನೀಡಲಾಗುತ್ತದೆ.
ದಿ. ಪ್ರಹ್ಲಾದಾಚಾರ್ಯ ಜೋಷಿ ಸ್ಮರಣಾರ್ಥ ಕೃಷ್ಣ ತುಂಗೆ ಪ್ರಾಯೋಜಿತ ನಗರ ಪ್ರಶಸ್ತಿಯನ್ನು 'ಕನ್ನಡಪ್ರಭ' ಪತ್ರಿಕೆಯ ಜಿಲ್ಲಾ ವರದಿಗಾರ ಜಗನ್ನಾಥ ದೇಸಾಯಿ, ದಿ. ಮಹಾದೇವಮ್ಮ ಬಸವರಾಜಸ್ವಾಮಿ ಮಾನವಿ ಸ್ಮರಣಾರ್ಥ ಪ್ರಶಸ್ತಿಯನ್ನು ಈಶಾನ್ಯ ಟೈಮ್ಸ್ ಪತ್ರಿಕೆಯ ಲಿಂಗಸ್ಗೂರು ವರದಿಗಾರ ಗುರುರಾಜ ಗೌಡೂರು, ದಿ. ಈಶ್ವರಮ್ಮ ನರಸಪ್ಪ ಜಲ್ದಾರ್ ಸ್ಮರಣಾರ್ಥ ಪ್ರಶಸ್ತಿಯನ್ನು ಜನಕೂಗು ಪತ್ರಿಕೆಯ ಮಾನವಿ ವರದಿಗಾರ ಹ್ಯಾರಿಸ್ ಕೊಟ್ನೆಕಲ್ ಅವರಿಗೆ ಪ್ರದಾನ ಮಾಡಲಾಗುತ್ತದೆ.
ಹಾಗೆಯೇ ಸ್ಪಂದನಾ ಸಂಸ್ಥೆಯ ನಂದಿಕೋಲುಮಠ ಪ್ರಾಯೋಜಿತ ಪ್ರಶಸ್ತಿಗೆ ಸಿಂಧನೂರಿನ ಸುದ್ದಿಮೂಲ ಪತ್ರಿಕೆಯ ವರದಿಗಾರ ಅಮರೇಶ ಅಲಬನೂರು, ಮಲ್ಲಿಕಾರ್ಜುನ ಹಳ್ಳೂರು ಸಿರವಾರ ಪ್ರಾಯೋಜಿತ ಫೋಟೋಗ್ರಫಿ ಗಾಗಿನ ಪ್ರಶಸ್ತಿಯನ್ನು ಪಬ್ಲಿಕ್ ಟಿವಿ ಕ್ಯಾಮೆರಾಮೆನ್ ಯಲ್ಲಾಲಿಂಗ ಅವರು ಆಯ್ಕೆಯಾಗಿದ್ದಾರೆಂದು ಸಂಘ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement