ಜಿಲ್ಲಾ ಪ್ರಶಸ್ತಿಗೆ ಅಮರೇಶ ಆಯ್ಕೆ
ಸಿಂಧನೂರು: ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಸ್ಪಂದನಾ ಸಂಸ್ಥೆಯ ನಂದಿಕೋಲುಮಠ ಪ್ರಾಯೋಜಿತ 2012-13ನೇ ಸಾಲಿನ ಜಿಲ್ಲಾ ಅತ್ಯುತ್ತಮ ವರದಿಗಾರ ಪ್ರಶಸ್ತಿಗೆ ಸುದ್ದಿಮೂಲ ದಿನಪತ್ರಿಕೆಯ ತಾಲೂಕಾ ವರದಿಗಾರ ಅಮರೇಶ ಅಲಬನೂರು ಆಯ್ಕೆಯಾಗಿದ್ದಾರೆಂದು ಜಿಲ್ಲಾ ಕಾರ್ಯದರ್ಶಿ ಎಂ. ಜಯರಾಮ ತಿಳಿಸಿದ್ದಾರೆ.
ಪತ್ರಿಕಾರಂಗದಲ್ಲಿನ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಜು.21 ರಂದು ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ತಿಳಿಸಿದ್ದಾರೆ.