ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಡಿತರ ಅವ್ಯವಸ್ಥೆ ಸರಿಪಡಿಸಲು ಆಗ್ರಹ

Lingaraj Badiger
Updated On : 20 Jul 2013, 11:16 am

ದೇವದುರ್ಗ: ತಾಲೂಕಿನ ಏಳು ಸಾವಿರ ಬಿಪಿಎಲ್ ಪಡಿತರ ಕಾರ್ಡುಗಳನ್ನು ಕಡಿತಗೊಳಿಸಿದ್ದು, ಕೂಡಲೇ ಇಲಾಖೆ ಕೈಗೊಂಡಿರುವ ಈ ಕ್ರಮ ಹಿಂದಕ್ಕೆ ಪಡೆಯುವಂತೆ ಅಹಿಂದ ಸಂಘಟನೆಯ ತಾಲೂಕು ಸಮಿತಿ ಆಗ್ರಹಿಸಿದೆ. ಈ ಕುರಿತು ಈಚೆಗೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿ, ಜುಲೈ ತಿಂಗಳಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಬಡವರು ತಮಗೆ ಆಹಾರ ಧಾನ್ಯಗಳಿಗೆ ನ್ಯಾಯ ಬೆಲೆ ಅಂಗಡಿಗಳಿಗೆ ತೆರಳಿದಾಗ ಕಾರ್ಡುಗಳನ್ನು ರದ್ದುಗೊಳಿಸಿರುವುದು ಪತ್ತೆಯಾಗಿದೆ. ಹಾಗೆಯೇ  ಬಿಪಿಎಲ್ ಕಾರ್ಡುದಾರರು ಬಯೋವುಟ್ರಿಕ್ ವ್ಯವಸ್ಥೆಯಡಿ ಹೆಬ್ಬೆರಳಿನ ಗುರ್ತು ನೀಡಿದ್ದರೂ, ಅಂಥವರ  ಆಹಾರ ಧಾನ್ಯ ಸಹ ಕಡಿತಗೊಳಿಸಲಾಗಿದೆ ಎಂದು ದೂರಿದರು. ಕೂಡಲೇ ಈ ಮೊದಲಿನಂತೆಯೇ ಆಹಾರ ಧಾನ್ಯ ಹಂಚಿಕೆ ಮಾಡುವಂತೆ ಒತ್ತಾಯಿಸಿದರು. ಅಹಿಂದ ಸಂಘಟನೆಯ ತಾಲೂಕು ಅಧ್ಯಕ್ಷ ಗಂಗಾಧರ ಅನ್ವರ, ಪ್ರಧಾನ ಕಾರ್ಯದರ್ಶಿ ಶಿವರಾಜ್ ರುದ್ರಾಕ್ಷಿ,  ಜಿಲ್ಲಾ ಪ್ರತಿನಿಧಿ ಜಿ. ಬಸವರಾಜ,  ಭೀಮಣ್ಣ ಆಲ್ಕೋಡ, ಶ್ರೀನಿವಾಸ ವಗಡಂಬಳಿ, ಪ್ರಭು ಬೂದಿನಾಳ, ಹನುಮಂತ್ರಾಯ ದೊರೆ,  ನಿತ್ಯಾನಂದ ಸ್ವಾಮಿ ಮಲ್ಲಾಪೂರ, ಮೈಹಿಬೂಬ್ ಹಟ್ಟಿ, ಯಂಕೋಬ ಭಜಂತ್ರಿ, ಮಲ್ಲಿಕಾರ್ಜುನ ಸೇರಿ ಅನೇಕರಿದ್ದರು.
ನಾಳೆ ಹುಟ್ಟುಹಬ್ಬ ಸಮಾರಂಭ
ರಾಯಚೂರು: ಜೈ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಅರುಣಕುಮಾರ್ ಪಾಟೀಲ್ ಅವರ 44ನೇ ಹುಟ್ಟುಹಬ್ಬದ ಕಾರ್ಯಕ್ರಮವನ್ನು ನಗರದಲ್ಲಿ ಜು.21ರಂದು ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 12.30ಕ್ಕೆ ನಗರದ ಮಾಣಿಕ ಪ್ರಭು ಅಂಥ ಮಕ್ಕಳ ಶಾಲೆಯಲ್ಲಿ ಹುಟ್ಟುಹಬ್ಬವನ್ನು ಆಯೋಜಿಸಿದ್ದು, ಶಾಸಕ ಡಾ.ಶಿವರಾಜ್ ಪಾಟೀಲ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘಟನೆ ಜಿಲ್ಲಾಧ್ಯಕ್ಷ ಗಂಗಾಧರಸ್ವಾಮಿ ವಹಿಸುವರು. ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತೆ ಮಂಜುಶ್ರೀ, ಡಿಡಿಪಿಐ ಪರಮೇಶ್, ಅತಿಥಿಗಳಾಗಿ ನಗರಸಭೆ ಸದಸ್ಯ ಪವನಕುಮಾರ್, ಇನ್ಸಪೆಕ್ಟರ್ ಅಲಿಸಾಬ್, ಸಂಘಟನೆಯ ರಾಜ್ಯ ಸಂಚಾಲಕ ಪ್ರಭುರಾಜ್ ಕೊಡ್ಲಿ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆಂದು ಸಂಘಟನೆ ತಿಳಿಸಿದೆ.
ಪೂರ್ವಭಾವಿ ಸಭೆ
ರಾಯಚೂರು: ನಗರದಲ್ಲಿ ಆಗಸ್ಟ್ 15ರಂದು ಆಚರಿಸುವ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯನ್ನು ಜು.24ರಂದು ನಗರದಲ್ಲಿ ಕರೆಯಲಾಗಿದೆ. ಅಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಪೂರ್ವಭಾವಿ ಸಭೆ ನಡೆಯಲಿದ್ದು, ಎಲ್ಲ ಅಧಿಕಾರಿಗಳು ಪಾಲ್ಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಎಂ. ತಿಮ್ಮಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement