ರಾಜ್ಯ ರೈತ ಸಂಘ ಗ್ರಾಮ ಘಟಕ ಉದ್ಘಾಟನೆ
ರಾಯಚೂರು: ಮಾನವಿ ತಾಲೂಕಿನ ಬಯಲ್ ಮರ್ಚೆಡ್ ಗ್ರಾಮದಲ್ಲಿ ಈಚೆಗೆ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕದ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿತ್ತು.
ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ಹೋರಾಡಲು ರೈತರು ಒಗ್ಗೂಡಬೇಕಿದೆ. ಪ್ರತಿ ಗ್ರಾಮದಲ್ಲಿ ಕೃಷಿ ಕ್ಷೇತ್ರದ ಸಂರಕ್ಷಣೆಗೆ ರೈತರು ರೈತ ಸಂಘವನ್ನು ಸೇರುವ ಮೂಲಕ ಬಲವರ್ಧನೆಗೊಳ್ಳಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಇದುವರೆಗೆ ಆಡಳಿತ ನಡೆಸಿದ ಎಲ್ಲ ರಾಜಕೀಯ ಪಕ್ಷಗಳ ಸರ್ಕಾರಗಳು ರೈತರಿಗೆ ಅನೇಕ ಭರವಸೆಗಳನ್ನು ನೀಡಿ ನಂತರ ಹುಸಿಗೊಳಿಸಿವೆ. ಅಂಥ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ರೈತರು ಒಗ್ಗೂಡುವುದು ಅವಶ್ಯಕ ಎಂದು ಹೇಳಿದರು. ರೈತ ಮುಖಂಡ ಬಾಲಾಜಿ ಭೀಮೇಶ್ವರರಾವ್ ಮಾತನಾಡಿದರು.
ವೆಂಕಟರಾವ್, ಯಂಕಪ್ಪ ಕಾರಬಾರಿ, ಬಸಪ್ಪ ಪೂಜಾರಿ,ಹನುಮಂತ ರಾಜಲಬಂಡಾ, ಸಿದ್ದಯ್ಯ ಸ್ವಾಮಿ, ರಮೇಶ ಗೋರ್ಕಲ್ ಸೇರಿದಂತೆ ಅನೇಕರಿದ್ದರು. ಗ್ರಾಮದ ನೂರಾರು ರೈತರು ಸಮಾರಂಭದಲ್ಲಿದ್ದರು.