ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಬಸವಣ್ಣ' ಸಿನಿಮಾ ಶೀರ್ಷಿಕೆ ತೆಗೆದು ಹಾಕಲು ಯೋಗ ಸಮಿತಿ ಆಗ್ರಹ

Vishwanath S
Updated On : 21 Jul 2013, 1:13 am

ಸಿಂಧನೂರು: ಕನ್ನಡ ಚಿತ್ರರಂಗದಲ್ಲಿ ಹೊಸದಾಗಿ ಸೆಟ್ಟೇರಿರುವ ಶ್ರೀನಿವಾಸರಾಜ ನಿರ್ದೇಶನದ, ಉಪೇಂದ್ರ ಅಭಿನಯದ ಬಸವಣ್ಣ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುವಂತೆ ಬಸವ ಯೋಗ ಸಮಿತಿಯ ಶಿವಣ್ಣ ಹ. ಸಣ್ಣಪ್ಪನವರ್ ಆಗ್ರಹಿಸಿದ್ದಾರೆ.
ಅಹಿಂದೆ, ಶಾಂತಿ, ಸಹೋದರತೆಯ ಮೂಲಕ ಸಮಾಜವನ್ನು ಬದಲಾಯಿಸಿದ ವಚನಕಾರ ಬಸವಣ್ಣರ ಹೆಸರನ್ನು ಚಿತ್ರಕ್ಕೆ ಇಟ್ಟಿರುವುದು ಅಸಂಬದ್ಧ. ಅದೂ ಅಲ್ಲದೇ ಒಬ್ಬ ಮಹಾನ್ ವ್ಯಕ್ತಿ ಶೀರ್ಷಿಕೆಗೆ ಅಸಮಂಜಸವೆಂಬಂತೆ ಗನ್, ಖಡ್ಗವನ್ನು ಬಳಸಿ ಪೋಸ್ಟರ್‌ಗಳನ್ನು ಬಿಟ್ಟಿರುವುದು ಖಂಡನೀಯ.
 ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ದಾರಿಮಾಡಿಕೊಡುತ್ತದೆ. ಕಾರಣ ಚಿತ್ರಕ್ಕೆ ಇಟ್ಟಿರುವ ಬಸವಣ್ಣ ಎಂಬ ಶೀರ್ಷಿಕೆಯನ್ನು ಕೂಡಲೇ ತೆಗೆದುಹಾಕಿ ಬೇರೆ ಶೀರ್ಷಿಕೆ ಇಟ್ಟುಕೊಳ್ಳಬೇಕು. ಇಲ್ಲ ವಾದಲ್ಲಿ ರಾಜ್ಯದಲ್ಲಿ ಉಗ್ರ ಸ್ವರೂಪದ ಹೋರಾಟಗಳು ಪ್ರಾರಂಭ ವಾಗುವುದರಲ್ಲಿ ಅನುಮಾನವಿಲ್ಲ ಎಂದು ಮನುಮತ ಬಳಗದ ಅಧ್ಯಕ್ಷ ಡಿ.ಎಚ್. ಕಂಬಳಿ, ಕನಕಗುರುಪೀಠ, ಬಸವ ಸಮಿತಿಯ ಶರಣಪ್ಪ ತೆಂಗಿನಕಾಯಿ, ಮಧುಸೂದನ ಗುಪ್ತಾ, ಗುಂಡಪ್ಪ ಬಳಿಗಾರ, ವೀರಭದ್ರಗೌಡ ಅಮರಾಪುರ, ಗೋವಿಂದ ರಾಜ ಬಾರಕೇರ, ಮಲ್ಲಿಕಾರ್ಜುನ ಹೂನೂರು, ಚಂದ್ರಶೇಖರ ಯರದಿಹಾಳ, ಎಂ.ಆರ್. ಶಿರೋಳ, ಬಸವ ಸಮಿತಿ, ಬಸವ ಯೋಗ ಸಮಿತಿ, ಬಸವಕೇಂದ್ರದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement