ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಸಹಬಾಳ್ವೆ ಮಹತ್ವ ಅರಿಯುವುದು ಅವಶ್ಯ'

Vishwanath S
Updated On : 21 Jul 2013, 1:12 am

ರಾಯಚೂರು: ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆಯಾಗುವಂಥ ಬೆಳವಣಿಗೆಗಳಾಗುತ್ತಿದ್ದು, ಎಲ್ಲರೂ ಸಹಬಾಳ್ವೆಯ ಮಹತ್ವವನ್ನು ಅರಿಯುವ ಅವಶ್ಯಕತೆಯಿದೆ ಎಂದು ಗುಲ್ಬರ್ಗ ವಿವಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎಲ್ ಹಿರೇಮಠ ಸಲಹೆ ನೀಡಿದರು.
ನಗರದಲ್ಲಿ ಶನಿವಾರ ಐಎಂಎ ಹಾಲ್‌ನಲ್ಲಿ ಜಿಲ್ಲಾ ಸಮಾಜಶಾಸ್ತ್ರೀಯ ಸಂಘದ ಉದ್ಘಾಟನೆ ನೆರವೇರಿಸಿ ಮಾತ ನಾಡಿ, ಸಮಾಜದಲ್ಲಿ ಬದುಕು ಸಾಗಿಸುವ ಎಲ್ಲರೂ ಸಾಮಾಜಿಕ ವಿಚಾರಗಳ ಬಗ್ಗೆ ಅರಿತುಕೊಂಡಿರುವುದು ತೀರಾ ಅವಶ್ಯಕ ಎಂದು ಹೇಳಿದರು.
ಇಂದಿನ ದಿನಮಾನದಲ್ಲಿ ಸಮಾಜ ಆತಂಕಕಾರಿ ಸ್ಥಿತಿಯಲ್ಲಿದೆ. ಕೌಟುಂಬಿಕ ವ್ಯವಸ್ಥೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಮಾರ್ಪಾಟುಗಳಾಗುತ್ತಿದ್ದು, ಸಹಬಾಳ್ವೆ ಮಾಯವಾಗುತ್ತಿದೆ. ಇದರಿಂದ ಸಮಾಜದಲ್ಲಿನ ಬಹುತೇಕರ ಜೀವನಕ್ಕೆ ಹಿನ್ನಡೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಜಿಲ್ಲಾ ಸಮಾಜಶಾಸ್ತ್ರೀಯ ಸಂಘದ ಅಧ್ಯಕ್ಷ ಬಸವರಾಜ ಕಳಸ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಸ್ಮಿತಾ ಅಕ್ಕನವರು, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಲ್ಲಯ್ಯ, ಅಯ್ಯಪ್ಪ ತುಕ್ಕಾಯಿ, ಎಸ್.ಚಂದ್ರಶೇಖರ್ ಇದ್ದರು. ವಿವಿಧೆಡೆಯಿಂದ ಆಗಮಿಸಿದ್ದ ನಗರದ ಜನತೆ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement