ಭಾರತ ಸೇವಾ ದಳ ಸಂಘಟಕರ ನೇಮಕ
ರಾಯಚೂರು: ಭಾರತ ಸೇವಾ ದಳದ ಜಿಲ್ಲಾ ಸಮಿತಿಯಿಂದ ಈಚೆಗೆ ಆಯೋಜಿಸಿದ್ದ ಶಿಬಿರದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಸೇವಾದಳ ಸಂಘಟಕರನ್ನು ನೇಮಿಸಲಾಗಿದೆ ಎಂದು ಸೇವಾದಳದ ಪ್ರಕಟಣೆ ತಿಳಿಸಿದೆ.
ರಾಯಚೂರು ತಾಲೂಕು ಸಂಘಟಕರಾಗಿ ದಯಾನಂದ, ದೇವದುರ್ಗ ತಾಲೂಕಿಗೆ ರಂಗನಾಥ, ಮಾನವಿ ತಾಲೂಕಿಗೆ ಮಹೆಬೂಬ್, ಲಿಂಗಸ್ಗೂರು ತಾಲೂಕಿಗೆ ಎಸ್.ಎಸ್. ರುದ್ರಗಂಟಿ, ಸಿಂಧನೂರು ತಾಲೂಕಿಗೆ ರಾಜಪ್ಪ ಅವರನ್ನು ಸಂಘಟಕರಾಗಿ ನೇಮಕ ಮಾಡಲಾಗಿದೆ ಎಂದು ಸೇವಾದಳದ ಜಿಲ್ಲಾ ಸಂಘಟಕ ವಿದ್ಯಾಸಾಗರ್ ಚಿಣಮಗೇರಿ ತಿಳಿಸಿದ್ದಾರೆ.