ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಂಪಿಸಿಎಲ್ ಲಾಕ್ ಔಟ್: ಸಭೆ ವಿಫಲ

Lingaraj Badiger
Updated On : 23 Jul 2013, 11:28 am

ರಾಯಚೂರು: ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅಧ್ಯಕ್ಷತೆಯಲ್ಲಿ ಮೈಸೂರು ಪೆಟ್ರೋಕೆಮಿಕಲ್ಸ್ ಕಂಪನಿಯ ಅಧಿಕಾರಿಗಳ ಜತೆ ಕಾರ್ಮಿಕರ ಸಭೆ ನಡೆಯಿತು. ಕಾರಖಾನೆಯು ಮುಚ್ಚಿದ್ದರಿಂದ ಹೋರಾಟ ನಡೆಸಿದ್ದ ಕಾರ್ಮಿಕರ ಒತ್ತಾಯದ ಮೇರೆಗೆ ಈ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ಪಾಲ್ಗೊಂಡ ಕಂಪನಿಯ ಅಧಿಕಾರಿಗಳು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕಂಪನಿಯನ್ನು ಮುಚ್ಚಲಾಗಿದೆ. ಕಾರ್ಖಾನೆ ಪುನಾರಂಭಿಸುವುದು ಅಸಾಧ್ಯ ಎಂದು ಸ್ಪಷ್ಟಪಡಿಸಿದರು. ಎಂಪಿಸಿಎಲ್ ಕಾರ್ಖಾನೆ ಮುಚ್ಚುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ನಿರ್ಧಾರ ಕೈಗೊಂಡು ಕ್ರಮ ಕೈಗೊಂಡಿದೆ. ಕಾರಖಾನೆ ನಿರ್ವಹಣೆ ಸಾಮರ್ಥ್ಯದ ಕೊರತೆಯಿಂದಲೇ ಈ ನಿರ್ಧಾರ ತಳೆಯಲಾಗಿದೆ ಎಂದು ಸಭೆಗೆ ವಿವರಿಸಿದರು. ಇದಕ್ಕೆ ಅಸಮ್ಮತಿ ಸೂಚಿಸಿದ ಕಾರ್ಮಿಕರು ಕಾರಖಾನೆ ಪುನಾರಂಭಕ್ಕೆ ಒತ್ತಾಯಿಸಿದರು. ಈ ವೇಳೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ, ಕಾರ್ಖಾನೆ ಆಡಳಿತದೊಂದಿಗೆ ಈ ಬಗ್ಗೆ ಪುನಾ ಚರ್ಚಿಸುವುದಾಗಿ ತಿಳಿಸಿದರು. ಸಭೆಯ ನಂತರ ಸಿಐಟಿಯು ಕಾರ್ಯಾಲಯದಲ್ಲಿ ಸಭೆ ಸೇರಿದ ಕಾರ್ಮಿಕರು ಕಾರ್ಖಾನೆ ಪುನಾರಂಭದವರೆಗೆ ಕಂಪನಿ ಎದುರು ಧರಣಿ ನಡೆಸಲು ನಿರ್ಧರಿಸಿದ್ದಾಗಿ ಪ್ರಕಟಣೆ ತಿಳಿಸಿದೆ.
ಮತದಾನ ಶಾಂತಿಯುತ
ರಾಯಚೂರು: ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ 6 ಸ್ಥಾನಗಳಿಗೆ ಸೋಮವಾರ ಚುನಾವಣೆ ಶಾಂತಿಯುತವಾಗಿ ನಡೆಯಿತು. ಇಲ್ಲಿನ ಹಾಷ್ಮಿಯಾ ಸರ್ಕಾರಿ ಶಾಲೆಯಲ್ಲಿ ಬೆಳಗ್ಗೆ 11ರಿಂದ ಮತದಾನ ಸಂಜೆ 4ರವರೆಗೆ ನಡೆಯಿತು. ವಿವಿಧ ಶಾಲೆಗಳ ಸಿಬ್ಬಂದಿ ಮತದಾನ ಮಾಡಿದರು. ಸೋಮವಾರ ಪ್ರಾಥಮಿಕ ಶಾಲೆ ಕ್ಷೇತ್ರಯ 4 ಸ್ಥಾನಗಳಿಗೆ 8 ಅಭ್ಯರ್ಥಿಗಳು ಹಾಗೂ ಪ್ರೌಢಶಾಲೆ ಕ್ಷೇತ್ರದಿಂದ 2 ಸ್ಥಾನಗಳಿಗೆ ಮೂವರು ಅಭ್ಯರ್ಥಿಗಳು ಸೇರಿ ಒಟ್ಟು 11 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement