ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ನಿರಂತರ ಜ್ಯೋತಿ'ಯಲ್ಲಿ ಅಕ್ರಮ; ಆರೋಪ

Lingaraj Badiger
Updated On : 23 Jul 2013, 11:28 am

ರಾಯಚೂರು: ರಾಯಚೂರು ಮತ್ತು ದೇವದುರ್ಗ ತಾಲೂಕುಗಳಲ್ಲಿ ನಿರಂತರ ಜ್ಯೋತಿ ವಿದ್ಯುತ್ ಯೋಜನೆ ಜಾರಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ನಿಯಮಗಳನ್ನು ಉಲ್ಲಂಘಿಸಿ ಕಳಪೆ ಕಾಮಗಾರಿ ಕೈಗೊಂಡಿರುವ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಈಚೆಗೆ ಮನವಿ ಸಲ್ಲಿಸಿತು. ಈ ಬಗ್ಗೆ ಜೆಸ್ಕಾಂ ಅಧೀಕ್ಷಕ ಅಭಿಯಂತರರ ಮೂಲಕ ಜೆಸ್ಕಾಂ ಮುಖ್ಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ ಸಂಘಟನೆ ಕಾರ್ಯಕರ್ತರು, ರಾಯಚೂರು ಗ್ರಾಮಾಂತರ ಮತ್ತು ದೇವದುರ್ಗ ತಾಲೂಕಿನಲ್ಲಿ ನಿರಂತರ ಜ್ಯೋತಿ ವಿದ್ಯುತ್ ಯೋಜನೆಯು ವಿ.ಆರ್. ಪಾಟೀಲ್ ಎಂಬ ಗುತ್ತಿಗೆದಾರರಿಗೆ 6 ತಿಂಗಳ ಅವಧಿ ನೀಡಿ ಟೆಂಡರ್ ಒದಗಿಸಲಾಗಿದೆ. ರಾಯಚೂರು ಗ್ರಾಮಾಂತರದಲ್ಲಿ 19 ಕೋಟಿ ಮತ್ತು ದೇವದುರ್ಗ ತಾಲೂಕಿನಲ್ಲಿ ಯೋಜನೆ ಜಾರಿಗೆ 15 ಕೋಟಿ ಕಾಮಗಾರಿಯನ್ನು ಪಾಟೀಲ್ ಅವರೊಬ್ಬರಿಗೆ ನೀಡಲಾಗಿದೆ. ಗುತ್ತಿಗೆದಾರರು ಉದ್ದೇಶಿತ ಯೋಜನೆಯಡಿಯ ಕಾಮಗಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂದು ಟೀಕಿಸಿದರು.
--
ಆ.1ರಿಂದ ಚಾತುರ್ಮಾಸ್ಯ ಮಹೋತ್ಸವ
ರಾಯಚೂರು: ಉಡುಪಿಯ ಫಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರ 35ನೇ ಚಾತುರ್ಮಾಸ್ಯ ಮಹೋತ್ಸವ ನಗರದಲ್ಲಿ ಆ.1ರಿಂದ ಸೆ.19ರವರೆಗೆ ನಡೆಯಲಿದೆ. ನಗರದ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀಗಳ ಚಾತುರ್ಮಾಸ್ಯ ಮಹೋತ್ಸವ ನಡೆಯಲಿದ್ದು, ಇದರಂಗವಾಗಿ ಜು.31ರಂದು ಸಂಜೆ 4ಕ್ಕೆ ನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಿಂದ ಶ್ರೀಜೋಡು ವೀರಾಂಜನೇಯ ದೇವಸ್ಥಾನದವರೆಗೆ ಶ್ರೀವಿದ್ಯಾಧೀಶತೀರ್ಥರ ಶೋಭಾಯಾತ್ರೆ ಆಯೋಜಿಸಲಾಗಿದೆ. ಚಾತುರ್ಮಾಸ ಸಂದರ್ಭದಲ್ಲಿ ಶ್ರೀವಿದ್ಯಾಧೀಶತೀರ್ಥರು ಆ.1 ರಿಂದ ಸೆ.19ರವರೆಗೆ ಶ್ರೀಮನ್ನ್ಯಾಯ ಸುಧಾಪಾಠ, ಉಪಾಸನಾ ಪಾಠ, ಪ್ರೋಷ್ಠಪದಿ ಭಾಗವತ, ಸಮಗ್ರ ರಾಮಾಯಣ ವಿಶೇಷ ಪ್ರವಚನ ನೀಡಲಿದ್ದಾರೆ. ಆ.20ರಂದು ಉಪಾಕರ್ಮ, ಆ.22ರಂದು ಶ್ರೀರಾಘವೇಂದ್ರಸ್ವಾಮಿ ಮಧ್ಯಾರಾಧನೆ, ಆ.28ರಂದು ಶ್ರೀಕೃಷ್ಣ ಗೋಕುಲಾಷ್ಟಮಿ ಅಂಗವಾಗಿ ಲಕ್ಷ ತುಳಸಿ ಅರ್ಚನೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement