ಚಂದ್ರಶೇಖರ ಹಿರೇಮಠ ತಂಡ ಮುನ್ನಡೆ
ಸಿಂಧನೂರು: ರಾಜ್ಯ ಸರ್ಕಾರ ನೌಕರರ ಸಂಘದ ಚುನಾವಣೆ ಅತ್ಯಂತ ತುರುಸಿನಿಂದ ನಡೆದಿದ್ದು, ವಿವಿಧ ಇಲಾಖೆಗಳ ಚುನಾವಣೆಯಲ್ಲಿ ಚಂದ್ರಶೇಖರ ಹಿರೇಮಠ ತಂಡ ಮುನ್ನಡೆ ಸಾಧಿಸಿದೆ ಎಂದು ತಿಳಿದು ಬಂದಿದೆ.
ಆರೋಗ್ಯ ಇಲಾಖೆಯ ರಂಗನಾಥ, ಧನಂಜಯ ಮೂರ್ತಿ, ಹುಸೇನಪ್ಪ ಮತ್ತು ವೆಂಕಟೇಶ ಕಂದಗಲ್ ಅವರು ಜಯ ಸಾಧಿಸಿದ್ದಾರೆ. ಕಂದಾಯ ಇಲಾಖೆ ವಿಭಾಗದಿಂದ ಸ್ಪರ್ಧಿಸಿದ್ದು ಶಿರಸ್ತೇದಾರ ರಾಮಣ್ಣ ಹೊಸಮನಿ ಮತ್ತು ಲಿಂಗಪ್ಪ ವಿಜೇತರಾಗಿದ್ದಾರೆ. ಹಾಗೆಯೇ ಪ್ರೌಢಶಾಲಾ ವಿಭಾಗದಿಂದ ಮಲ್ಲಪ್ಪ ಬಾದರ್ಲಿ ಮತ್ತು ಶರಣಬಸವಯ್ಯ ವಿಜೇತರಾಗಿದ್ದು ಇವರೆಲ್ಲ ಚಂದ್ರಶೇಖರ ಹಿರೇಮಠ ತಂಡದವರೆಂದು ಹೇಳಲಾಗಿದೆ.
ಹೈದ್ರಾಬಾದ್ ಟೂರ್: ವಿವಿಧ ಇಲಾಖೆಗಳ ಈಗಾಗಲೇ 23 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿರುವ ಸರ್ಕಾರಿ ನೌಕರರು ಹೈದ್ರಾಬಾದ್ಗೆ ಪ್ರವಾಸ ಹೊರಟಿದ್ದಾರೆಂದು ಗೊತ್ತಾಗಿದ್ದು, ಅವರಲ್ಲಿ ಬಹುತೇಕ ಚಂದ್ರಶೇಖರ ಹಿರೇಮಠ ತಂಡಕ್ಕೆ ಸೇರಿದವರೆನ್ನಲಾಗಿದೆ.
ವಿ.ಬಸವರಾಜ ತಂಡವು ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಸಂಭವವಿದೆ ಎನ್ನಲಾಗಿದೆ. ಈಗಾಗಲೇ ಅವಿರೋಧವಾಗಿ ಆಯ್ಕೆಯಾದವರು ಮತ್ತು ಪ್ರೌಢಶಾಲಾ ವಿಭಾಗದ ಹೊರತುಪಡಿಸಿದರೆ ತಮ್ಮ ಗುಂಪಿನಲ್ಲಿ ಹೆಚ್ಚಿನ ನಿರ್ದೇಶಕರು ಗುರುತಿಸಿಕೊಳ್ಳಲಿದ್ದಾರೆ ಎಂದು ವಿ. ಬಸವರಾಜ ತಿಳಿಸಿದ್ದಾರೆ. ಯಾವುದಕ್ಕೂ ಮುಂಬರುವ ಆ.1ರಂದು ನಡೆಯುವ ಚುನಾವಣೆವರೆಗೆ ಬರೀ ಲೆಕ್ಕಾಚಾರಗಳೇ ನೌಕರರ ವಲಯದಲ್ಲಿ ನಡೆಯುತ್ತವೆ.