ಜಿಲ್ಲಾದ್ಯಂತ ಜಡಿ ಮಳೆ; ಸಂಚಾರ ವ್ಯತ್ಯಯ
ಕ.ಪ್ರ. ವಾರ್ತೆ, ರಾಯಚೂರು, ಜು.23
ನಗರ ಸೇರಿದಂತೆ ಜಿಲ್ಲಾದ್ಯಂತ ಸೋಮವಾರ ರಾತ್ರಿಯಿಂದೀಚೆಗೆ ಹಾಗೂ ಮಂಗಳವಾರ ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮಳೆ ಲಿಂಗಸ್ಗೂರು ತಾಲೂಕಿನ ಹಟ್ಟಿ ಗ್ರಾಮದಲ್ಲಿ 48 ಮಿಮೀ.ನಷ್ಟು ಸುರಿದಿದೆ.
ನಗರದಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ದಿನವಿಡೀ ಮಳೆ ಸುರಿಯಿತು. ನಗರದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ರಸ್ತೆ ಸಂಚಾರಕ್ಕೆ ವ್ಯತ್ಯಯವಾಯಿತು. ನಗರದಲ್ಲಿ 17.4 ಮಿಮೀ ಮಳೆಯಾಗಿದ್ದು, ತಾಲೂಕಿನ ಯರಮರಸ್ನಲ್ಲಿ 26.5 ಮಿಮೀ, ಯರಗೇರಾ- 18 ಮಿಮೀ, ಗಿಲ್ಲೆಸೂಗೂರು-19 ಮಿಮೀ, ಕಲ್ಮಲಾ-20 ಮಿಮೀ, ಜೇಗರಕಲ್- 25 ಮಿಮೀ, ದೇವಸೂಗೂರು- 43.2 ಮಿಮೀ, ಚಂದ್ರಬಂಡಾದಲ್ಲಿ 10 ಮಿಮೀ ಮಳೆಯಾಗಿದೆ.
ಮಾನವಿ ಪಟ್ಟಣದಲ್ಲಿ 27 ಮಿಮೀ, ಕುರ್ಡಿ- 22.3 ಮಿಮೀ, ಕಲ್ಲೂರು- 15 ಮಿಮೀ, ಸಿರವಾರ-13.2 ಮಿಮೀ, ಮಲ್ಲಟ- 26 ಮಿಮೀ ಕುರುಕುಂದಾ- 24 ಮಿಮೀ, ಕವಿತಾಳ- 34 ಮಿಮೀ, ಪಾಮನಕಲ್ಲೂರು-21 ಮಿಮೀ, ರಾಜಲಬಂಡಾ-23 ಮಿಮೀ, ಹಾಲಾಪುರದಲ್ಲಿ 24 ಮಿಮೀ ಮಳೆಯಾಗಿದೆ.
ದೇವದುರ್ಗ ಪಟ್ಟಣದಲ್ಲಿ 24 ಮಿಮೀ, ಅರಕೇರಾ-25.6 ಮಿಮೀ, ಗಬ್ಬೂರು- 15 ಮಿಮೀ, ಗಲಗ-17.3 ಮಿಮೀ, ಜಾಲಹಳ್ಳಿ- 26.5 ಮಿಮೀ ಮಳೆಯಾಗಿದೆ. ಲಿಂಗಸ್ಗೂರು ಪಟ್ಟಣದಲ್ಲಿ 35 ಮಿಮೀ, ಮುದಗಲ್-20 ಮಿಮೀ, ಹಟ್ಟಿ- 48 ಮಿಮೀ, ಮಸ್ಕಿ- 17 ಮಿಮೀ ಮಳೆಯಾಗಿದೆ.
ಸಿಂಧನೂರು ನಗರದಲ್ಲಿ 17.6 ಮಿಮೀ, ಜವಳಗೇರಾ- 17 ಮಿಮೀ, ಬಳಗಾನೂರು- 11 ಮಿಮೀ, ಸಾಲಗುಂದಾ- 4.2 ಮಿಮೀ, ತುರ್ವಿಹಾಳ- 8.4 ಮಿಮೀ, ಗುಡದೂರು- 14.3 ಮಿಮೀ, ವಲ್ಕಂದಿನ್ನಿ- 13.6 ಮಿಮೀ, ಗುಂಜಳ್ಳಿ- 15.8 ಮಿಮೀ, ಜಾಲಿಹಾಳ- 10.8 ಮಿಮೀ ಹಾಗೂ ಹೆಡಗಿನಾಳ ಗ್ರಾಮದಲ್ಲಿ 28.2 ಮಿಮೀ.ನಷ್ಟು ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
1.40 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ
ಲಿಂಗಸ್ಗೂರು: ನಾರಾಯಣಪುರ ಜಲಾಶಯದಿಂದ ಮಂಗಳವಾರ ಕೃಷ್ಣಾ ನದಿಗೆ 1.40 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗುತ್ತಿದೆ.
ಜಲಾಶಯದ ಮಂಗಳವಾರದ ನೀರಿನ ಮಟ್ಟ 491.330 ಮೀಟರ್ ಇದ್ದು, 29 ಟಿಎಂಸಿ ನೀರು ಸಂಗ್ರಗೊಂಡಿರುತ್ತದೆ. ಗರಿಷ್ಠ ನೀರಿನ ಮಟ್ಟ 492.252 ಮೀಟರ್(33 ಟಿಎಂಸಿ) ಇರುತ್ತದೆ.
ಆಲಮಟ್ಟಿ ಜಲಾಶಯದಿಂದ 1.30 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದರಿಂದ ನಾರಾಯಣಪುರ ಜಲಾಶಯದಿಂದ 19 ಗೇಟುಗಳ ಮೂಲಕ ಕೃಷ್ಣಾ ನದಿಗೆ 1.40 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ.