ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುದಗಲ್‌ನಲ್ಲಿ ವಿಚಿತ್ರ ಕುರಿ ಮರಿ ಜನನ

Lingaraj Badiger
Updated On : 25 Jul 2013, 11:26 am

ಮುದಗಲ್: ಭೂಮಿಯ ಮೇಲೆ ಮಾನವನಿಂದ ಹಿಡಿದು ಪ್ರಾಣಿಗಳು ಸೇರಿದಂತೆ ನಿಸರ್ಗದಲ್ಲಿಯೂ ಕೆಲ ಅಪರೂಪದ ಘಟನೆ, ವೈಚಿತ್ರ್ಯಗಳನ್ನು ಇತ್ತೀಚೆಗೆ ಹೆಚ್ಚಾಗಿ ಕಾಣುತ್ತಿದ್ದೇವೆ. ಅದೇ ರೀತಿ ಪಟ್ಟಣದ ವೆಂಕಟರಾಯನ ಪೇಟೆಯಲ್ಲಿ ಕುರಿಯೊಂದು ವಿಚಿತ್ರ ಮರಿಗೆ ಜನನ ನೀಡಿದೆ.
ಪಟ್ಟಣದ ವೆಂಕಟರಾಯನಪೇಟೆ ತಿಪ್ಪಣ್ಣ ಹುಲೇಗಿ ಎನ್ನುವವರು ಕುರಿ, ಆಡು(ಮೇಕೆ)ಗಳನ್ನು ಸಾಕಿಕೊಂಡು ಕೃಷಿಯ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಕುರಿ ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಒಂದೇ ತೆಲೆಯುಳ್ಳ, ಎರಡು ದೇಹ ಹಾಗೂ ಎಂಟು ಕಾಲುಗಳುಳ್ಳ ಮರಿಯೊಂದಕ್ಕೆ ಜನ್ಮ ನೀಡಿದೆ.
ಮರಿ ಮಾತ್ರ ಜನಿಸುತ್ತಲೇ ಮೃತಪಟ್ಟಿರುವುದು ಸುತ್ತಮುತ್ತಲಿನ ರೈತಾಪಿ ಜನರಿಗೆ, ಮಾಲೀಕರಿಗೆ ನೋವುಂಟು ಮಾಡಿದೆ. ವಿಚಿತ್ರ ಕುರಿ ಮರಿ ಜನಿಸಿರುವ ಸುದ್ದಿ ಪಟ್ಟಣದಲ್ಲಿ ಹಬ್ಬುತ್ತಿದ್ದಂತೆ ಜಿಟಿಜಿಟಿ ಮಳೆಯನ್ನು ಲೆಕ್ಕಿಸದೆ ಜನರು ತಂಡೋಪ ತಂಡವಾಗಿ ಆಗಮಿಸಿ ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement