ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಇಂದು ಜಯಂತಿ

Lingaraj Badiger
Updated On : 26 Jul 2013, 11:53 am

ರಾಯಚೂರು: ನಗರದಲ್ಲಿ ಜು.26 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯಿಂದ ಪ್ರೊ.ಬಿ. ಕೃಷ್ಣಪ್ಪನವರ 75ನೇ ಹುಟ್ಟುಹಬ್ಬ ಹಾಗೂ ಛತ್ರಪತಿ ಶಾಹು ಮಹಾರಾಜರ 139ನೇ ಜಯಂತಿ ಸಮಾರಂಭ ಆಯೋಜಿಸಲಾಗಿದೆ. ಅಂದು ನಗರದ ರಂಗಮಂದಿರದಲ್ಲಿ ಬೆಳಗ್ಗೆ 11.30ಕ್ಕೆ ನಡೆಯುವ ಸಮಾರಂಭವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಂದಿರಾ ಕೃಷ್ಣಪ್ಪ, ಬಿ.ಸಿ. ಮಹೇಂದ್ರ, ನಾಗಣ್ಣ ಬಡಿಗೇರ್ ರಮೇಶ ಡಾಕುಳಗಿ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆ ಮಾವಳ್ಳಿ ಶಂಕರ್ ವಹಿಸುವರು. ಡಾ.ಅಪ್ಪಗೆರೆ ಸೋಮಶೇಖರ್ ಛತ್ರಪತಿ ಶಾಹುಮಹಾರಾಜ್ ಅವರ ಕುರಿತು ವಿಷಯ ಮಂಡಿಸಲಿದ್ದಾರೆ. ಬಿ. ಕೃಷ್ಣಪ್ಪ ಕುರಿತು ಬಾಬು ಭಂಡಾರಿಗಲ್ ಮತ್ತು ದಾನಪ್ಪ ನಿಲೋಗಲ್ ವಿಷಯ ಮಂಡಿಸಲಿದ್ದಾರೆ.
ಡಿ.ಇಡಿ ಮರುಪರೀಕ್ಷೆ
ರಾಯಚೂರು: ತಾಲೂಕಿನ ಹತ್ತಿರದ ಯರಮರಸ್‌ನ ಆನಂದ ಪ್ರೌಢಶಾಲೆ ಹಾಗೂ ಯರಮರಸ್‌ನ ಡಯಟ್ ಕೇಂದ್ರದಲ್ಲಿ ಜು.30ರಂದು ನಡೆಯಲಿರುವ ದ್ವಿತೀಯ ಡಿ.ಇಡಿ ಮರು ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ. ಮರುಪರೀಕ್ಷೆಯು ಜು.30ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಎರಡು ಕೇಂದ್ರಗಳಲ್ಲಿ ಮಾತ್ರ ನಡೆಯಲಿದೆ ಎಂದು ಡಯಟ್‌ನ ಉಪನಿರ್ದೇಶಕರ ಕಚೇರಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments