ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿದ್ಧಾಂತ ಶಿಖಾಮಣಿ ಲೋಕಾರ್ಪಣೆ

Lingaraj Badiger
Updated On : 27 Jul 2013, 11:24 am

ರಾಯಚೂರು: ಜ್ಞಾನ ಮತ್ತು ಸನ್ಮಾರ್ಗದಲ್ಲಿ ಮಾನವ ಜೀವನ ನಡೆಸುವಂತಾಗಲು ಸಿದ್ಧಾಂತ ಶಿಖಾಮಣಿ ಗ್ರಂಥದ ಪಾರಾಯಣ ಅವಶ್ಯಕ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸಲಹೆ ನೀಡಿದರು.
ನಗರದ ಸೋಮವಾರಪೇಟೆ ಹಿರೇಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಪಲ್ಲಕ್ಕಿ ಮಹೋತ್ಸವ, ಪಾದಯಾತ್ರೆ ಮತ್ತು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಮನುಷ್ಯನಲ್ಲಿನ ಪಾಪ ಪ್ರಜ್ಞೆ ನಿವಾರಣೆಗೆ ಸಿದ್ಧಾಂತ ಶಿಖಾಮಣಿ ನೆರವಾಗಲಿದೆ. ಎಲ್ಲರೂ ಸಿದ್ಧಾಂತ ಶಿಖಾಮಣಿ ಪಾರಾಯಣ ಮಾಡುವ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳಲು ಸಲಹೆ ನೀಡಿದರು.
ಸಂಸ್ಕೃತ ಭಾಷೆಯಲ್ಲಿರುವ ಸಿದ್ಧಾಂತ ಶಿಖಾಮಣಿಯನ್ನು ಈಗಾಗಲೇ 8 ಭಾಷೆಗಳಿಗೆ ಭಾಷಾಂತರಿಸಿದ್ದು, ದೇಶ ವಿದೇಶಗಳಲ್ಲಿ ಗ್ರಂಥವನ್ನು ಅಧ್ಯಯನ ಮಾಡಲು ಪೂರಕವಾಗಿ ಅಂತರ್ಜಾಲದಲ್ಲಿ ಅಳವಡಿಸುವ ಉದ್ದೇಶವಿದೆ ಎಂದು ಹೇಳಿದರು.
ಜಾಲಹಳ್ಳಿ ಜಯಶಾಂತಲಿಂಗೇಶ್ವರ ಮಹಾಸಂಸ್ಥಾನ ಮಠದ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮಿ ಗ್ರಂಥ ಪರಿಚಯ ಮತ್ತು ಧರ್ಮ ಸಂದೇಶವನ್ನು ನೀಡಿದರು.
ಇದ್ದಕ್ಕೂ ಮುನ್ನ ಸಾವಿರ ದೇವರ ಮಠ ಕಿಲ್ಲೆ ಬೃಹನ್ಮಠದಿಂದ ಸೋಮವಾರಪೇಟೆ ಹೀರೆಮಠದವರೆಗೆ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಕಾಶಿ ಜ್ಞಾನ ಸಿಂಹಾಸನಾಶ್ವರ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ಮೆರವಣಿಗೆ ನಡೆಸಲಾಯಿತು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿಚಾವಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರಶಿವಾಚಾರ್ಯರು, ಗಬ್ಬೂರು-ಮಟಮಾರಿ-ಬಿಚ್ಚಾಲಿಯ ಮಠದ ವೀರಭದ್ರ ಶಿವಾಚಾರ್ಯ ಸ್ವಾಮಿ, ಕಲ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement