ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಾಯಕ್‌ಗೆ ಅತ್ಯುನ್ನತ ಶಿಕ್ಷಕ ಪ್ರಶಸ್ತಿ

Mainashree
Updated On : 28 Jul 2013, 11:07 am

ರಾಯಚೂರು: ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಐಸಿಎಆರ್‌ನ 85ನೇ ಸಂಸ್ಥಾಪನೆ ದಿನಾಚರಣೆ ಸಂದರ್ಭ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ. ಎಂ.ಕೆ. ನಾಯಕ್ ಅವರಿಗೆ ಅತ್ಯುನ್ನತ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತಿಯ ಕೃಷಿ ಅನುಸಂಧಾನ ಪರಿಷತ್ತಿನಿಂದ ಕೊಡಮಾಡುವ 2012ನೇ ಸಾಲಿನ ಭಾರತ ರತ್ನ ಸಿ.ಸುಬ್ರಮಣ್ಯಂ ಅತ್ಯುನ್ನತ ಶಿಕ್ಷಕ ಪ್ರಶಸ್ತಿ ಜತೆಗೆ 1 ಲಕ್ಷ ನಗದು ಬಹುಮಾನವನ್ನು ಕೇಂದ್ರ ಕೃಷಿ ಮಂತ್ರಿ ಶರದ ಪವಾರ್ ಪ್ರದಾನ ಮಾಡಿದರು. ಡಾ. ನಾಯಕ್ ಅವರು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಸ್ ಸೌಲಭ್ಯಕ್ಕೆ ಆಗ್ರಹ
ಹುಣಸಗಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪದವಿ ಮಹಾವಿದ್ಯಾಲಯಗಳಿಗೆ ಗೆದ್ದಲಮರಿ, ಕೊಡೇಕಲ್ ಇನ್ನಿತರ ಕಡೆಗಳಿಂದ ವಿದ್ಯಾರ್ಥಿಗಳು ದಿನನಿತ್ಯ ಬರುತ್ತಿದ್ದು, ಸರಿಯಾದ ಸಮಯಕ್ಕೆ ಬಸ್ ಸಂಚಾರ ವ್ಯವಸ್ಥೆ ಇಲ್ಲದ್ದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಘಟಕ ವ್ಯವಸ್ಥಾಪಕರಿಗೆ ಬರೆದ ಮನವಿ ಪತ್ರವನ್ನು ಹುಣಸಗಿ ಸಂಚಾರಿ ನಿಯಂತ್ರಕ ಬಸವರಾಜ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಅವ್ಯವಸ್ಥೆ: ವಿದ್ಯಾರ್ಥಿ ಪ್ರತಿನಿಧಿ ಮಲ್ಲಪ್ಪ ಅಂಗಡಿ ಮಾತನಾಡಿ, ಕೊಡೇಕಲ್, ರಾಜನಕೋಳೂರ, ಬಲಶೆಟ್ಟಿಹಾಳ, ಕಾಮನಟಗಿಯಿಂದ ನಿತ್ಯ ಕಾಲೇಜುಗಳಿಗೆ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರುತ್ತಾರೆ. ಆದರೆ ಬೆಳಗ್ಗೆ ಈ ಗ್ರಾಮಗಳಿಂದ ಕಾಲೇಜುಗಳಿಗೆ ಬರಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಆದ್ದರಿಂದ ಕಾಲೇಜು ಸಮಯಕ್ಕೆ ಸರಿಯಾಗಿ ಹಾಜರಾಗಬೇಕಾದರೆ ಬೆಳಗ್ಗೆ 7ಗಂಟೆಗೆ ಕೊಡೇಕಲ್‌ನಿಂದ ಹುಣಸಗಿಗೆ ಒಂದು ಬಸ್ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement