ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಮಹಿಳೆಯರ ಪೀಡಿಸಿದ್ರೆ ಕಠಿಣ ಶಿಕ್ಷೆ'

Lingaraj Badiger
Updated On : 29 Jul 2013, 11:06 am

ಸಿಂಧನೂರು: ಹೆಣ್ಣುಮಕ್ಕಳೊಂದಿಗೆ ಸೂಕ್ಷ್ಮವಾಗಿ ನಡೆದು, ಗೌರವಯುತವಾಗಿ ಮಾತನಾಡಿಸಬೇಕು, ಯಾವುದೇ ಕಾರಣವಿಟ್ಟುಕೊಂಡು ಅವರನ್ನು ಪೀಡಿಸುವುದಾಗಲಿ, ನೋಯಿಸುವುದಾಗಲಿ ಮಾಡಿದರೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸಿವಿಲ್ ಪ್ರಧಾನ ನ್ಯಾಯಾಧೀಶೆ ಬಿ.ಎಸ್. ರಾಯಣ್ಣನವರ್ ಹೇಳಿದರು.
ನಗರದ ಶಾರದಾ ಮಹಿಳಾ ಕಾಲೇಜಿನಲ್ಲಿ ತಾಲೂಕು ಕಾನೂನ ಸೇವಾ ಸಮಿತಿ, ತಾಲೂಕ ವಕೀಲರ ಸಂಘದ ಹಾಗೂ ಎನ್ನೆಸ್ಸೆಸ್ ಘಟಕದ ಸಂಯುಕ್ತಾಶ್ರಯದಲ್ಲಿ ಪೀಡನೆ(ಹಿಂಸೆ) ವಿರೋಧಿ ನಿಮಿತ್ತ ಕಾನೂನು ಅರಿವು-ನೆರವು ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ವಕೀಲ ಶೇಖರಪ್ಪ ಧುಮತಿ ಮಾತನಾಡಿ, ದೈಹಿಕ ಮತ್ತು ಮಾನಸಿಕವಾಗಿ ಹೆಣ್ಣುಮಕ್ಕಳಿಗೆ ಹಿಂಸೆ ನೀಡುವುದು ಅಪರಾಧ. ಮುಗ್ಧ ಹೆಣ್ಣುಮಕ್ಕಳಿಗೆ ರ್ಯಾಗಿಂಗ್ ಮಾಡಿದಾಗ ಎಷ್ಟೋ ಜನ ಅವಮಾನ ಸಹಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುರುಷರು ಇದೇ ಪ್ರವೃತ್ತಿ ಮುಂದುವರಿಸಿದರೆ ಕಠಿಣ ಶಿಕ್ಷೆ ನಿಶ್ಚಿತ. ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತೊಂದರೆಗೆ ಒಳಗಾದರೆ ಪೋಷಕರ ಗಮನಕ್ಕೆ ತರುವಂತೆ ಸಲಹೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಸರ್ಕಾರಿ ಸಹಾಯಕ ಆಯೋಜಕ ಶೇಖರಪ್ಪ ಶಾಲಿಗನೂರು, ಕೆ.ಹನುಮೇಶ ವಕೀಲ, ಶಾರದಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ವಿಜಯಕುಮಾರ, ಖಾಜಿಮಲಿಕ್ ವಕೀಲ, ಪ್ರಾಚಾರ್ಯ ಬಸವರಾಜ ಬಾದರ್ಲಿ, ಎನ್ನೆಸ್ಸೆಸ್ ಅಧಿಕಾರಿ ಮಂಜುನಾಥ ಎನ್.   ಭಾಗವಹಿಸಿದ್ದರು. ಶಾಂತಾದಾಸ ಪ್ರಾರ್ಥಿಸಿದರು. ಮಂಜುನಾಥ ಎನ್.ಸ್ವಾಗತಿಸಿದರು. ರಾಜಣ್ಣ ನಿರೂಪಿಸಿದರು. ಶೋಭಾ ತೊರೆಗಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement