ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಸಗೊಬ್ಬರ ಕೃತಕ ಅಭಾವ: ಕ್ರಮದ ಎಚ್ಚರಿಕೆ

Rashmi Kasaragodu
Updated On : 30 Jul 2013, 11:37 am

ರಾಯಚೂರು: ಜಿಲ್ಲೆಯಲ್ಲಿ ಕೃತಕ ಅಭಾವ ಸೃಷ್ಟಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಎಚ್ಚರಿಸಿದೆ.ಈ ಬಗ್ಗೆ ಪ್ರಕಟಣೆ ನೀಡಿರುವ ಇಲಾಖೆಯು, ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರವು ಮಾರ್ಕೆಟಿಂಗ್ ಫೆಡರೇಶನ್ ನಲ್ಲಿ 15ಸಾವಿರ ಮೆಟ್ರಿಕ್ ಟನ್ ದಾಸ್ತಾನಿದ್ದು, ಸಹಕಾರ ಸಂಘಗಳಿಗೆ ಮಾರ್ಕೆಟಿಂಗ್ ಫೆಡರೇಶನ್ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.ಸಹಕಾರ ಸಂಘಗಳಲ್ಲಿ ನಿಗದಿತ ದರದಲ್ಲಿ ಗೊಬ್ಬರ ಪಡೆಯಲು ಅವಕಾಶ ಕಲ್ಪಿಸಿದ್ದು, ಸಹಕಾರ ಸಂಘಗಳಿಗೆ ಈಗಾಗಲೇ 9ಸಾವಿರ ಮೆ.ಟನ್ ಯೂರಿಯಾ ರಸಗೊಬ್ಬರ ಒದಗಿಸಲಾಗಿದೆ. ಖಾಸಗಿ ಮಾರಾಟಗಾರರಲ್ಲಿ ಸುಮಾರು 1200 ಮೆ.ಟನ್ ನಷ್ಟು ಯೂರಿಯಾ ರಸಗೊಬ್ಬರ ದಾಸ್ತಾನಿದೆ.ಈಗಾಗಲೇ ಸಹಾಯಕ ಕೃಷಿ ನಿರ್ದೇಶಕರು, ಇಲಾಖಾ ಸಿಬ್ಬಂದಿ ಖಾಸಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಯೂರಿಯಾ ರಸಗೊಬ್ಬರ ದಾಸ್ತಾನಿನ ಬಗ್ಗೆ ಹಾಗೂ ವಿತರಣೆ ಪರಿಶೀಲಿಸಿದ್ದಾರೆ. ಮಾರಾಟಗಾರರು ಕೃತಕ ಅಭಾವವನ್ನು ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಅಥವಾ ರೈತರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದೆ.
ಡಿಪ್ಲೋಮಾ ಪ್ರವೇಶ; ಇಂದು ಕೊನೆ ದಿನ
ಲಿಂಗಸ್ಗೂರು: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಡಿಪ್ಲೋಮಾ ಪ್ರವೇಶ ಅವಧಿಯನ್ನು ಜು.30 ರವರೆಗೆ ವಿಸ್ತರಿಸಲಾಗಿದೆ ಎಂದು ಕಾಲೇಜು ಪ್ರಾಚಾರ್ಯರು ತಿಳಿಸಿದ್ದಾರೆ. 2013- 14ನೇ ಸಾಲಿನ ಪ್ರಥಮ ಡಿಪ್ಲೋಮಾ ಪ್ರವೇಶದ ಅವಧಿಯನ್ನು ಜು.29ರಿಂದ ಜು.30ರವರೆಗೆ ಸರ್ಕಾರದ ಆದೇಶದ ಮೇರೆಗೆ ವಿಸ್ತರಿಸಲಾಗಿದ್ದು, ಪ್ರವೇಶ ಅರ್ಜಿಗಳನ್ನು ಸರ್ಕಾರಿ ಪಾಲಿಟೆಕ್ನಿಕ್ ಲಿಂಗಸ್ಗೂರಲ್ಲಿ ಕೊಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಜು.30ರ ಮ.2 ಗಂಟೆವರೆಗೆ ಕಾಲೇಜು ಪ್ರಾಚಾರ್ಯರಿಗೆ ಸಲ್ಲಿಸತಕ್ಕದ್ದು. ನಂತರ ಅಂದು ಮ.3 ಗಂಟೆಗೆ ಮೆರಿಟ್ ಪಟ್ಟಿ ಪ್ರಕಟಿಸಲಾಗುವುದು, ಅಂದು 3.30ಕ್ಕೆ ನೇರ ಸಂದರ್ಶ ನಡೆಸಲಾಗುವುದೆಂದು ತಿಳಿಸಿದ್ದಾರೆ.
'ಆರಾಧನೆ ಇರಲಿ'
ಸುರಪುರ: ದೇವರು ಎಲ್ಲ ಕಡೆಯೂ ಇದ್ದು ಅವನನ್ನು ಒಲಿಸಿಕೊಳ್ಳಲು ಯಾವುದೇ ಸಾಧನ, ತಂತ್ರ ಇಲ್ಲ. ಭಕ್ತಿಯೇ ದೇವನನ್ನು ಒಲಿಸಿಕೊಳ್ಳುವ ಪರಮ ಮಾರ್ಗವಾಗಿದ್ದು, ದೇವರ ಆರಾಧನೆ ಮಾಡುವುದೇ ಒಂದು ಪ್ರಮುಖ ಕಾಯಕವಾಗಿದೆ ಎಂದು ಅಖಿಲ ವಿಶ್ವ ಗಾಯಿತ್ರಿ ಪರಿವಾರ ಶಾಂತಿಕುಂಜ ಹರಿದ್ವಾರದ ಸ್ವಾಮೀಜಿ ಸೋನಿಜಿ ತಿಳಿಸಿದರು.ರಂಗಪೇಟೆ ಈಶ್ವರ- ಬನಶಂಕರಿ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಪಂಚ ಹೋಮಕುಂಡಗಳ ಯಜ್ಞದ ಸಾನ್ನಿಧ್ಯ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement