ಕಲ್ಪನಾ ರಾಜ್ಯ ಮಟ್ಟಕ್ಕೆ ಆಯ್ಕೆ
ಸಿಂಧನೂರು: ನಗರದ ಕನಕದಾಸ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು. ಕಲ್ಪನಾ ತಂದೆ ಮುಕಣ್ಣ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈ ಸ್ಪರ್ಧೆಯಲ್ಲಿ ಒಟ್ಟು 280 ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ತಮ್ಮ ಶಾಲೆಯ ವಿಜ್ಞಾನ ಶಿಕ್ಷಕ ಅಶೋಕ ಕುಮಾರ ಪರಂಡಿ ಅವರ ಮಾರ್ಗದರ್ಶನದಲ್ಲಿ ಭೂಕಂಪನ ಸೂಚಕ ಮಾದರಿಯೊಂದಿಗೆ ಭಾಗವಹಿಸಿ ತನ್ನ ವಾಕ್ ಚಾತುರ್ಯದಿಂದ ವಿಷಯ ಮಂಡಿಸಿ ಆಯ್ಕೆಯಾಗಿರುವುದು ಶಾಲೆಗೆ ಹೆಮ್ಮೆಯ ಸಂಗತಿ ಎಂದು ಕನಕದಾಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ, ಕಾರ್ಯದರ್ಶಿ ಹಿರೇಲಿಂಗಪ್ಪ ಹಂಚಿನಾಳ, ವ್ಯವಸ್ಥಾಪಕ ಬೀಮೋಜಿರಾವ್ ಕುಲಕರ್ಣಿ, ಪ್ರೌಢಶಾಲೆಯ ಮು.ಗು. ನಾಗಲಿಂಗನಗೌಡ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.