ಸಾಕ್ಷರತಾ ಪ್ರೇರಕರ ಸಂಘಕ್ಕೆ ಆಯ್ಕೆ
ದೇವದುರ್ಗ: ಸಾಕ್ಷರತಾ ಪ್ರೇರಕ ಸಂಘದ ನೂತನ ಅಧ್ಯಕ್ಷರಾಗಿ ಸಾಬಣ್ಣ ಕಮ್ಮಲದಿನ್ನಿ ಹಾಗೂ ಗೌರವಾಧ್ಯಕ್ಷರಾಗಿ ಗಿರಿಯಪ್ಪ ಪೂಜಾರಿ ಆಯ್ಕೆಯಾಗಿದ್ದಾರೆ. ಸಂಘಟನೆಯಡಿ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ದೇವಣ್ಣ ನಾಯಕ ಪಾಟೀಲ್ ಗಲಗ, ಯಂಕಪ್ಪ ಕಾವಲಿ, ಪ್ರಭು ಯಾದವ್ ಗಬ್ಬೂರು, ಮಲ್ಲಪ್ಪ ಕೊಪ್ಪರ, ಬಂದೇನವಾಜ್ ನಾಗಡದಿನ್ನಿ, ಶಿವಪ್ಪ ಯಲ್ಲಪ್ಪ, ಅಯ್ಯಪ್ಪ, ನಾಗರಾಜ್, ಶೇಖರಪ್ಪ, ಗಂಗಮ್ಮ, ಪವಿತ್ರ, ಮಂಜುಳಾ, ದೇವಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘ ತಿಳಿಸಿದೆ.