18ರಂದು ಪ್ರತಿಭಾ ಪುರಸ್ಕಾರ
ರಾಯಚೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಆ. 18ರಂದು ನಗರದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಅಂದು ನಗರದ ರಂಗಮಂದಿರದಲ್ಲಿ ಸಂಜೆ 4ಕ್ಕೆ ಸಮಾರಂಭ ನಡೆಯಲಿದ್ದು, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಷದಲ್ಲಿ ಜಿಲ್ಲೆಗೆ ಹೆಚ್ಚಿನ ಸ್ಥಾನ ಪಡೆದವರು ಹಾಗೂ 100ಕ್ಕೆ 100 ಅಂಕ ಗಳಿಸಿದ ಯಾವುದೇ ಜಾತಿಯ ವಿದ್ಯಾರ್ಥಿ ಮತ್ತು ಅವರಿಗೆ ಕಲಿಸಿದ ಗುರುಗಳನ್ನು ಮಹಾಸಭಾದಿಂದ ಸನ್ಮಾನಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಶೇ. 80ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಜಿಲ್ಲೆಯ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳನ್ನೂ ಇದೇ ವೇಳೆ ಪುರಸ್ಕರಿಸಲಾಗುತ್ತದೆ. ಮೂಲತಃ ರಾಯಚೂರು ಜಿಲ್ಲೆಯವರಾಗಿದ್ದು, ಬೇರೆ ಜಿಲ್ಲೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ಸಾಧನೆ ಮಾಡಿದ್ದಲ್ಲಿ ಅಂಥ ವಿದ್ಯಾರ್ಥಿಯನ್ನೂ ಸನ್ಮಾನಿಸಲು ನಿರ್ಧರಿಸಲಾಗಿದೆ.
ಸಾಧನೆ ಮಾಡಿದ ವಿದ್ಯಾರ್ಥಿಗಳು ಅಂಕಪಟ್ಟಿಯ ಪ್ರತಿ ಹಾಗೂ ಎರಡು ಭಾವಚಿತ್ರಗಳೊಂದಿಗೆ ಆ. 10ರೊಳಗೆ ನರಸಿಂಗರಾವ್ ದೇಶಪಾಂಡೆ ಮೊ. 94486 48844, ಡಾ. ಆನಂದತೀರ್ಥ ಫಡ್ನೀಸ್- 94486 95874, ಪ್ರಾಣೇಶ್ ಮುತಾಲಿಕ್- 94480 01479, ಸುಧೀರ್- 98455 46649, ಸಂಕರ್ಷಣ- 94802 84359 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಆಯಾ ತಾಲೂಕುಗಳ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಲು ತಿಳಿಸಲಾಗಿದೆ.