ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಪಮಾನಕ್ಕೆ ಖಂಡನೆ

Lingaraj Badiger
Updated On : 1 Aug 2013, 11:07 am

ಸಿಂಧನೂರು: ಸಿಬಿಎಸ್‌ಸಿ ಪಠ್ಯಕ್ರಮದ 5ನೇ ತರಗತಿಯ ಸಮಾಜ ಪುಸ್ತಕದ 139ನೇ ಪುಟದಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಬಲಿದಾನ ಮಾಡಿದ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರನ್ನು ಹುಕ್ಕಾ ಹಿಡಿದಿರುವಂತೆ ಚಿತ್ರಿಸಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿಯ ಮಧ್ವರಾಜ್ ಆಚಾರ್, ಅವಿನಾಶ ದೇಶಪಾಂಡೆ, ಕೆ. ಬಾಳಪ್ಪ ಖಂಡಿಸಿದ್ದಾರೆ.
ಈ ಕುರಿತು ನೀಡಿರುವ ಹೇಳಿಕೆ ಅವರು ಮಾತೃಭೂಮಿಗಾಗಿ ಪ್ರಾಣವನ್ನೇ ಲೆಕ್ಕಿಸದೆ ವೀರಾವೇಶದಿಂದ ಹೋರಾಡಿದ ಝಾನ್ಸಿ ರಾಣಿಯನ್ನು ಹುಕ್ಕಾ ಸೇವಿಸುವಂತೆ ಮಾಡಿರುವುದು ದೇಶದ್ರೋಹದ ಅಪರಾಧವಾಗಿದೆ. ಇಂತಹ ಅಪರಾಧ ಎಸಗಿದ ಪಠ್ಯಕ್ರಮ ಮಂಡಳಿ ಮತ್ತು ಸಂಬಂಧಿಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕೂಡಲೇ ಬೇಷರತ್ತಾಗಿ ಕ್ಷಮೆಯಾಚನೆ ಮಾಡಿ ಪಠ್ಯಕ್ರಮವನ್ನು ಹಿಂದೆಗೆಯಬೇಕೆಂದು ಆಗ್ರಹಿಸಿದ್ದಾರೆ.


ಹತ್ತು ದಿನದಿಂದ ಕತ್ತಲಲ್ಲಿ ರಾಮತ್ನಾಳ ಗ್ರಾಮ
ಸಿಂಧನೂರು: ತಾಲೂಕಿನ ರಾಮತ್ನಾಳ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು, 10 ದಿನಗಳಿಂದ ಕಗ್ಗತ್ತಲಿನಲ್ಲಿ ವಾಸಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡು ಇಷ್ಟು ದಿನ ಕಳೆದರೂ, ತಮ್ಮ ಗ್ರಾಮದ ಕಡೆಗೆ ಯಾವೊಬ್ಬ ಅಧಿಕಾರಿಯೂ ತಿರುಗಿ ನೋಡುತ್ತಿಲ್ಲ. ಹೀಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವಂತಾಗಿದೆ. ಕಚೇರಿಗೆ ಮುತ್ತಿಗೆ ಹಾಕುವ ಮುನ್ನ ಜೆಸ್ಕಾಂ ಅಧಿಕಾರಿಗಳು ಕೂಡಲೇ ತಮ್ಮ ಗ್ರಾಮಕ್ಕೆ ಹೊಸ ವಿದ್ಯುತ್ ಪರಿವರ್ತಕ ಅಳವಡಿಸಬೇಕೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement