ಐಟಿಐ ಪರೀಕ್ಷೆ: ನಕಲಿಗೆ ಡಿಸಿ ತಡೆ
ರಾಯಚೂರು: ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಪರೀಕ್ಷೆ ವೇಳೆ ಅಕ್ರಮಕ್ಕೆ ಅವಕಾಶ ನೀಡಿದ ಬಗ್ಗೆ ಬಂದ ಮಾಹಿತಿ ಮೇರೆಗೆ ಅಕ್ರಮ ತಡೆಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಪರೀಕ್ಷಾ ಮೇಲ್ವಿಚಾರಕರನ್ನು ಬದಲಿಸಿರುವ ಘಟನೆ ನಡೆದಿದೆ. ಐಟಿಐ ಕಾಲೇಜಿನಲ್ಲಿ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ ನೀಡಲಾಗಿದೆ. ಅದರಿಂದ ಪ್ರತಿಭಾವಂತರಿಗೆ ಅನ್ಯಾಯವಾಗಿದೆ ಎಂಬ ದೂರು ಕೇಳಿಬಂದಿತ್ತು. ಅದರಿಂದ ಎಚ್ಚೆತ್ತ ಜಿಲ್ಲಾಧಿಕಾರಿಗಳು ಕೂಡಲೇ ಪರೀಕ್ಷೆ ಕೇಂದ್ರದ ಇಬ್ಬರು ಮೇಲ್ವಿಚಾರಕರನ್ನು ಸೇವೆಯಿಂದ ಕೈಬಿಟ್ಟು, ಅವರ ಸ್ಥಾನದಲ್ಲಿ ಭೂಮುನ ಇಲಾಖೆಯ ಅಧಿಕಾರಿ ಉಮೇಶ್ ಮತ್ತು ಜಿಪಂ ಯೋಜನಾಧಿಕಾರಿ ಡಾ.ಟಿ. ರೋಣಿ ಅವರನ್ನು ನಿಯುಕ್ತಿಗೊಳಿಸಿದ್ದಾರೆಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.