67,570 ಹೆ. ಮುಂಗಾರು ಬಿತ್ತನೆ ಗುರಿ
ಕನ್ನಡಪ್ರಭ ವಾರ್ತೆ , ಲಿಂಗಸ್ಗೂರು , ಜೂ.1
ತಾಲೂಕಿನಲ್ಲಿ ಪ್ರಸಕ್ತ ಸಾಲಿಗೆ ನೀರಾವರಿ 12,050 ಹಾಗೂ ಖುಷ್ಕಿ 55,520 ಸೇರಿದಂತೆ ಒಟ್ಟು 67,570 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಏಕದಳ, ದ್ವಿದಳ, ಎಣ್ಣೆಕಾಳು ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಕ್ಷೇತ್ರ ಹೊಂದಿದೆ ಎಂದು ಕೃಷಿ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.
ಏಕದಳ ಧಾನ್ಯ: ಬತ್ತ ನೀರಾವರಿ- 4 ಸಾವಿರ ಹೆಕ್ಟೇರ್. ಜೋಳ ನೀರಾವರಿ- 50 ಹೆಕ್ಟೇರ್. ಮೆಕ್ಕೆಜೋಳ ನೀರಾವರಿ- 200 ಹೆಕ್ಟೇರ್. ಹೈಬ್ರಿಡ್ ಸಜ್ಜೆ ನೀರಾವರಿ 5500 ಹಾಗೂ ಖುಷ್ಕಿ 25 ಸಾವಿರ ಸೇರಿ 30,500 ಹೆಕ್ಟೇರ್. ನವಣಿ ಖುಷ್ಕಿ 25 ಹೆಕ್ಟೇರ್. ಒಟ್ಟು ಏಕದಳ ಧಾನ್ಯಗಳು ನೀರಾವರಿ 9,750 ಹೆಕ್ಟೇರ್ ಹಾಗೂ ಖುಷ್ಕಿ 25,025 ಹೆಕ್ಟೇರ್ ಸೇರಿ 34,775 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕ್ಷೇತ್ರ ಹೊಂದಿದೆ.
ದ್ವಿದಳ ಧಾನ್ಯ: ತೊಗರಿ ನೀರಾವರಿ 500 ಹಾಗೂ ಖುಷ್ಕಿ 14 ಸಾವಿರ ಸೇರಿ 14,500 ಹೆಕ್ಟೇರ್. ಹೆಸರು ಖುಷ್ಕಿ 400 ಹೆಕ್ಟೇರ್. ಅಲಸಂದಿ ಖುಷ್ಕಿ 100 ಹೆಕ್ಟೇರ್. ಹುರಳಿ ಖುಷ್ಕಿ 25 ಹೆಕ್ಟೇರ್. ಒಟ್ಟು ದ್ವಿದಳ ಧಾನ್ಯಗಳು ನೀರಾವರಿ 500 ಹೆಕ್ಟೇರ್ ಹಾಗೂ ಖುಷ್ಕಿ 14,525 ಹೆಕ್ಟೇರ್ ಪ್ರದೇಶ ಸೇರಿ 15,025 ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಎಣ್ಣೆಕಾಳು: ಶೇಂಗಾ ನೀರಾವರಿ 50 ಹೆಕ್ಟೇರ್, ಖುಷ್ಕಿ 400 ಹೆಕ್ಟೇರ್ ಸೇರಿ 450 ಹೆಕ್ಟೇರ್ ಪ್ರದೇಶ. ಸೂರ್ಯಕಾಂತಿ ನೀರಾವರಿ 250 ಹೆ. ಹಾಗೂ ಖುಷ್ಕಿ 7500 ಹೆಕ್ಟೇರ್ ಸೇರಿ 7,750 ಹೆ.ಪ್ರದೇಶ. ಎಳ್ಳು ಖುಷ್ಕಿ 3 ಸಾವಿರ ಹೆಕ್ಟೇರ್. ಔಡಲ ಖುಷ್ಕಿ 50 ಹೆಕ್ಟೇರ್. ಗುರೆಳ್ಳು ಖುಷ್ಕಿ 20 ಹೆಕ್ಟೇರ್. ಒಟ್ಟು ಎಣ್ಣೆಕಾಳುಗಳು ನೀರಾವರಿ 300 ಹೆಕ್ಟೇರ್ ಹಾಗೂ ಖುಷ್ಕಿ 10,970 ಹೆಕ್ಟೇರ್ ಸೇರಿ 11,270 ಹೆಕ್ಟೇರ್ ಬಿತ್ತನೆ ಕ್ಷೇತ್ರ ಹೊಂದಿದೆ.
ಅದರಂತೆ ಹತ್ತಿ ನೀರಾವರಿ 1500 ಹೆಕ್ಟೇರ್ ಹಾಗೂ ಖುಷ್ಕಿ 5 ಸಾವಿರ ಹೆಕ್ಟೇರ್ ಸೇರಿ 6,500 ಹೆಕ್ಟೇರ್ ಪ್ರದೇಶವಿದ್ದು, ತಾಲೂಕಿನಾದ್ಯಂತ ಸಮಗ್ರವಾಗಿ ನೀರಾವರಿ ಕ್ಷೇತ್ರ 12,050 ಹೆಕ್ಟೇರ್ ಹಾಗೂ ಖುಷ್ಕಿ 55,520 ಹೆಕ್ಟೇರ್ ಸೇರಿದಂತೆ ಒಟ್ಟು 67,570 ಹೆಕ್ಟೇರ್ ಪ್ರದೇಶದ ಬಿತ್ತನೆ ಕ್ಷೇತ್ರ ಹೊಂದಿರುತ್ತದೆ.
ಬೀಜ, ಗೊಬ್ಬರ ತೊಂದರೆಯಿಲ್ಲ: ಪ್ರಸಕ್ತ 2013- 14ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜದ ಅಭಾವ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ರೈತರ ಅಗತ್ಯಕ್ಕೆ ತಕ್ಕಂತೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಲಾಗುವುದೆಂದು ಕೃಷಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಲಿಂಗಸ್ಗೂರು, ಯರಗುಂಟ, ಮುದಗಲ್, ನಾಗರಹಾಳ, ಗುರುಗುಂಟಾ, ಮಸ್ಕಿ, ಮೆದಿಕಿನಾಳ ಸೇರಿದಂತೆ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಸೂರ್ಯಕಾಂತಿ, ಮೆಕ್ಕೆಜೋಳ, ಬತ್ತ, ತೊಗರಿ, ಹೆಸರು ಸೇರಿದಂತೆ ಬಿತ್ತನೆ ಬೀಜ ಪೂರೈಕೆ ಮಾಡುವ ಉದ್ದೇಶದಿಂದ ರೈತರ ಅಗತ್ಯತೆಗೆ ಅನುಗುಣವಾಗಿ ಬಿತ್ತನೆ ಬೀಜಗಳ ಬೇಡಿಕೆ ಸಲ್ಲಿಸಲಾಗಿದೆ.
ಬೇಡಿಕೆ: ಸೂರ್ಯಕಾಂತಿ- ಲಿಂಗಸ್ಗೂರು ರೈತ ಸಂಪರ್ಕ ಕೇಂದ್ರಕ್ಕೆ 80 ಕ್ವಿಂ, ಯರಗುಂಟ ರೈತ ಸಂಪರ್ಕ ಕೇಂದ್ರಕ್ಕೆ 20 ಕ್ವಿಂ, ಮುದಗಲ್ 115 ಕ್ವಿಂ, ನಾಗರಹಾಳ 70 ಕ್ವಿಂ, ಗುರುಗುಂಟಾ 97 ಕ್ವಿಂ, ಮಸ್ಕಿ 120 ಕ್ವಿಂ, ಮೆದಿಕಿನಾಳ 50 ಕ್ವಿಂ ಸೇರಿದಂತೆ 7 ರೈತ ಸಂಪರ್ಕ ಕೇಂದ್ರಗಳ ಪೈಕಿ ಒಟ್ಟು 462 ಕ್ವಿಂ.ಗೆ ಬೇಡಿಕೆ ಸಲ್ಲಿಸಲಾಗಿದೆ.
ಮೆಕ್ಕೆಜೋಳ- ಲಿಂಗಸ್ಗೂರು ರೈತ ಸಂಪರ್ಕ ಕೇಂದ್ರಕ್ಕೆ 1 ಕ್ವಿಂ, ಮುದಗಲ್ 2 ಕ್ವಿಂ, ನಾಗರಹಾಳ 5 ಕ್ವಿಂ, ಗುರುಗುಂಟಾ 0.50 ಕ್ವಿಂ ಸೇರಿದಂತೆ ಒಟ್ಟು 8.50 ಕ್ವಿಂ. ಮೆಕ್ಕೆಜೋಳದ ಬೇಡಿಕೆಯಿದೆ. ಸಜ್ಜೆ- ಮಸ್ಕಿ 5 ಕ್ವಿಂ, ಮೆದಿಕಿನಾಳ 2 ಕ್ವಿಂ ಸೇರಿದಂತೆ 7 ರೈತ ಸಂಪರ್ಕ ಕೇಂದ್ರಗಳ ಪೈಕಿ ಒಟ್ಟು 7 ಕ್ವಿಂ ಸಜ್ಜೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
ಬತ್ತ- ಲಿಂಗಸ್ಗೂರು ರೈತ ಸಂಪರ್ಕ ಕೇಂದ್ರಕ್ಕೆ 500 ಕ್ವಿಂ, ಯರಗುಂಟ 500 ಕ್ವಿಂ, ಮುದಗಲ್ 300 ಕ್ವಿಂ, ನಾಗರಹಾಳ 100 ಕ್ವಿಂ, ಗುರುಗುಂಟಾ 500 ಕ್ವಿಂ, ಮಸ್ಕಿ 200 ಕ್ವಿಂ, ಮೆದಿಕಿನಾಳ 100 ಕ್ವಿಂ ಸೇರಿದಂತೆ 7 ರೈತ ಸಂಪರ್ಕ ಕೇಂದ್ರಗಳ ಪೈಕಿ ಒಟ್ಟು 2,200 ಕ್ವಿಂ ಬತ್ತದ ಬೇಡಿಕೆಯಿದೆ.
ತೊಗರಿ- ಲಿಂಗಸ್ಗೂರು ಕೇಂದ್ರಕ್ಕೆ 10 ಕ್ವಿಂ, ಯರಗುಂಟ 10 ಕ್ವಿಂ, ಮುದಗಲ್ 15 ಕ್ವಿಂ, ನಾಗರಹಾಳ 9 ಕ್ವಿಂ, ಗುರುಗುಂಟಾ 8 ಕ್ವಿಂ, ಮಸ್ಕಿ 5 ಕ್ವಿಂ, ಮೆದಿಕಿನಾಳ 2 ಕ್ವಿಂ ಸೇರಿದಂತೆ 7 ರೈತ ಸಂಪರ್ಕ ಕೇಂದ್ರಗಳ ಪೈಕಿ ಒಟ್ಟು 59 ಕ್ವಿಂ. ಬೇಡಿಕೆ ಸಲ್ಲಿಸಲಾಗಿದೆ.
ಹೆಸರು- ಲಿಂಗಸ್ಗೂರು ರೈತ ಸಂಪರ್ಕ ಕೇಂದ್ರಕ್ಕೆ 5 ಕ್ವಿಂ, ಯರಗುಂಟ 5 ಕ್ವಿಂ, ಮುದಗಲ್ 12 ಕ್ವಿಂ, ನಾಗರಹಾಳ 5 ಕ್ವಿಂ, ಗುರುಗುಂಟಾ 5 ಕ್ವಿಂ, ಮಸ್ಕಿ 2 ಕ್ವಿಂ, ಮೆದಿಕಿನಾಳ 2 ಕ್ವಿಂ ಸೇರಿದಂತೆ 7 ರೈತ ಸಂಪರ್ಕ ಕೇಂದ್ರಗಳ ಪೈಕಿ ಒಟ್ಟು 36 ಕ್ವಿಂ ಹೆಸರು ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.