ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅವಿಶ್ವಾಸಕ್ಕೆ ಮುನ್ನವೇ ರಾಜಿನಾಮೆ

Lingaraj Badiger
Updated On : 4 Jun 2013, 11:15 am

ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.3
ಸ್ಥಳೀಯ ತಾಲೂಕು ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಬೆಂಬಲಸಿ 14 ಸದಸ್ಯರು ಸಭೆಯಲ್ಲಿ ಹಾಜರಿದ್ದು ಪರವಾಗಿ ಮತ ಚಲಾಯಿಸಿದ ಪ್ರಸಂಗ ಸೋಮವಾರ ನಡೆಯಿತು.
ನಗರದ ತಾಪಂ ಸಭಾಂಗಣದಲ್ಲಿ ಕರೆದಿದ್ದ ಅವಿಶ್ವಾಸ ಕುರಿತ ಸಭೆಯಲ್ಲಿ ಕಾಂಗ್ರೆಸ್‌ನ 12, ಜೆಡಿಎಸ್ 2 ಹಾಗೂ ಬಿಜೆಪಿಯ ಒಬ್ಬರು ಸದಸ್ಯರು ಅವಿಶ್ವಾಸ ಬೆಂಬಲಿಸುವ ಮೂಲಕ ಅವಿಶ್ವಾಸ ಅಂಗೀಕಾರವಾಯಿತು.
ಸ.ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ರು: ಸ್ಥಳೀಯ ತಾಲೂಕು ಪಂಚಾಯಿತಿಯಲ್ಲಿ ಒಟ್ಟು 23 ಜನ ಸದಸ್ಯ ಬಲವಿದ್ದು, ಈ ಪೈಕಿ ಕಾಂಗ್ರೆಸ್‌ನ 12, ಬಿಜೆಪಿಯ 6 ಹಾಗೂ ಜೆಡಿಎಸ್‌ನ 5 ಸದಸ್ಯರಿದ್ದು, ಅಧ್ಯಕ್ಷೆ ಅನಂತಮ್ಮ ಹಾಗೂ ಉಪಾಧ್ಯಕ್ಷೆ ಮಂಜುಳಾ ಅವರ ವಿರುದ್ಧ 11 ಜನ ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿ ಮೇ 20ಕ್ಕೆ ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು.
ಅದರಂತೆ ಸಹಾಯಕ ಆಯುಕ್ತರು ಮೇ 21ರಂದು ತಾಪಂ ಇಒ ಪೋಂಸಿಂಗ್ ಅವರಿಗೆ ಅವಿಶ್ವಾಸ ಸಭೆಯನ್ನು ವಾರದೊಳಗೆ ಕರೆಯಲು ಸೂಚಿಸಿದ್ದರು. ಆದರೆ ಈ ಮಧ್ಯೆ ಅಧ್ಯಕ್ಷೆ ಅನಂತಮ್ಮ ಹಾಗೂ ಉಪಾಧ್ಯಕ್ಷೆ ಮಂಜುಳಾ ಅವರು ಜೂ. 1ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸಿದ್ದರು.
ಆದರೆ ಸದಸ್ಯರು ತಮಗೆ ತಾಪಂ.ನಿಂದ ಅವಿಶ್ವಾಸ ಕುರಿತ ಸಭೆಯ ನೋಟಿಸ್ ಕೈಸೇರಿದ್ದರಿಂದ ಸೋಮವಾರ ಬೆಳಗ್ಗೆ ಸಭೆಗೆ ಹಾಜರಾಗಿ ಅವಿಶ್ವಾಸಕ್ಕೆ ಬೆಂಬಲಿಸಿ ಸಹಿ ಹಾಕಿದರು. ಮುಂದಿನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಬಗ್ಗೆ ಜಿಲ್ಲಾಧಿಕಾರಿಗಳು ದಿನಾಂಕ ನಿಗದಿಗೊಳಿಸಲಿದ್ದಾರೆ ಎಂದು ತಾಪಂ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement