ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೋರಾಟಕ್ಕೆ ಬೆಂಬಲಿಸಲು ಶೇಕ್ಷಾಖಾದ್ರಿ ಆಗ್ರಹ

Lingaraj Badiger
Updated On : 4 Jun 2013, 11:16 am

ರಾಯಚೂರು: ನಗರದ ಸರ್ಕಾರಿ ನೌಕರರ ಭವನ ಸ್ಪಂದನದಲ್ಲಿ ಸೋಮವಾರ ತಾಲೂಕು ಬಿಸಿಯೂಟ ನೌಕರರ ಸಂಘದ 3ನೇ ತಾಲೂಕು ಸಮ್ಮೇಳನ ನಡೆಯಿತು.
ಸಮ್ಮೇಳನಕ್ಕೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ ಚಾಲನೆ ನೀಡಿ, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗಿನ ಕಾರ್ಮಿಕ ಸಂಘಟನೆಗಳ ಸಭೆಯಲ್ಲಿ ಬಿಸಿಯೂಟ ನೌಕರರನ್ನು ಕಾಯಂ ನೌಕರರೆಂದು ಪರಿಗಣಿಸಲು ಒತ್ತಾಯಿಸಲಾಗಿದೆ. ಗೌರವ ಧನದ ಬದಲಿಗೆ ಕನಿಷ್ಠ ವೇತನ ನಿಗದಿ ಮಾಡಲು ಆಗ್ರಹಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವ್ಯಕ್ತಪಡಿಸಿದ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಿ ಜೂ. 14ರಂದು ರಾಜ್ಯಾದ್ಯಂತ ಹೋರಾಟ ಆಯೋಜಿಸಿದ್ದು ಈ ಹೋರಾಟದಲ್ಲಿ ಎಲ್ಲ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ ಮಾತನಾಡಿ, ಅತೀ ಕಡಿಮೆ ವೇತನದಲ್ಲಿ ಬಿಸಿಯೂಟ ನೌಕರರನ್ನು ದುಡಿಸಿಕೊಳ್ಳಲಾಗುತ್ತಿದೆ. ಕನಿಷ್ಠ ವೇತನ 10 ಸಾವಿರ ನೀಡಬೇಕೆಂದು ಒತ್ತಾಯಿಸಿದರು. ಸಮಾರಂಭದಲ್ಲಿ ಕೆ.ಜಿ. ವೀರೇಶ್, ವೈ.ಈರಣ್ಣ, ಅಕ್ಕಮ್ಮ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement