ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಗೆ ಆಯ್ಕೆ

Lingaraj Badiger
Updated On : 5 Jun 2013, 11:19 am

ರಾಯಚೂರು: ನಗರದಲ್ಲಿ ಜೂ.15ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಕವಿಗಳನ್ನು ಆಯ್ಕೆ ಮಾಡಲಾಗಿದೆ.
   ಈ ಕುರಿತು ಪ್ರಕಟಣೆ ನೀಡಿರುವ ತಾಲೂಕು ಕಸಾಪ ಅಧ್ಯಕ್ಷ ಚಿದಾನಂದ ಸಾಲಿ, ಆಂಜನೇಯ ಜಾಲಿಬೆಂಚಿ ಅಧ್ಯಕ್ಷತೆಯಲ್ಲಿ ಜರುಗುವ ಕವಿಗೋಷ್ಠಿಯಲ್ಲಿ ಡಾ. ದಸ್ತಗೀರಸಾಬ್ ದಿನ್ನಿ, ತಾಯರಾಜ್ ಮರ್ಚಟ್ಹಾಳ್, ಎನ್.ಬಿ. ಲಕ್ಷ್ಮಿರೆಡ್ಡಿ ಹೊಸೂರು, ವೆಂಕಟೇಶ ನವಲಿ, ಆನಂದ ಜೂಕೂರು, ವೆಂಕಟೇಶ ಬೇವಿನಬೆಂಚಿ, ಸಂಧ್ಯಾ ಕುಪನೇಶಿ, ನೀಲು ಮಳಿಮಠ, ಕೊರೇನಲ್ ದೇವಸೂಗೂರು, ವಾಣಿ ಮಾಲಿ ಪಾಟೀಲ್, ಮಹಾದೇವ ಪಾಟೀಲ್, ಖಾನ್ ಸಾಬ್ ಮೋಮಿನ್, ದಂಡಪ್ಪ ಬಿರಾದಾರ್, ಅಮರೇಶ ಗೋನವಾರ, ಮಂಜುನಾಥ ಅತ್ತನೂರು ಸೇರಿದಂತೆ ಅನೇಕರು ಆಯ್ಕೆಯಾಗಿದ್ದಾರೆಂದು ತಿಳಿಸಿದ್ದಾರೆ.
ಜೂಜು: 13 ಜನರ ಬಂಧನ
ರಾಯಚೂರು: ದೇವದುರ್ಗ ಪಟ್ಟಣದಲ್ಲಿ ಇಸ್ಪೀಟ್ ಆಡುತ್ತಿದ್ದ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶಿವಪ್ಪ, ತಿಮ್ಮಪ್ಪಗೌಡ, ಮಲ್ಹಾರ್ ರಾವ್, ಎಂಡಿ ಖಾಸೀಂ, ರವೀಂದ್ರ, ಮಲ್ಲಿಕಾರ್ಜುನ, ಮರಿಯಪ್ಪ, ಭೀಮನಗೌಡ, ಬಸವರಾಜ, ನಿಂಗಪ್ಪ, ಶರಣಯ್ಯಸ್ವಾಮಿ, ಹನುಮಂತ ಮತ್ತು ದಾವಿದ್ ಎಂದು ಗುರುತಿಸಲಾಗಿದೆ. ಇವರು ಇಸ್ಪೀಟ್ ಆಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ನಗದು 18,450 ಹಾಗೂ 11 ಮೊಬೈಲ್ ಜಪ್ತಿ ಮಾಡಿದ್ದಾರೆ. ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement