ಉಚಿತ ಪ್ರಸಾದ ನಿಲಯ: ಪ್ರವೇಶಕ್ಕೆ ಅರ್ಜಿ ಆಹ್ವಾನ
ರಾಯಚೂರು: ಮಾನವಿ ತಾಲೂಕು ವೀರಶೈವ ಸಮಿತಿಯಿಂದ ನಿರ್ವಹಿಸುತ್ತಿರುವ ಚೆನ್ನಬಸವ ತಾತನವರ ಉಚಿತ ಪ್ರಸಾದ ನಿಲಯಕ್ಕೆ ಪ್ರವೇಶಕ್ಕಾಗಿ ಅರ್ಜಿ ವಿತರಣೆ ಕಾರ್ಯ ಜೂ.5ರಿಂದ ಆರಂಭಗೊಂಡಿದೆ. ಈ ಕುರಿತು ಪ್ರಕಟಣೆ ನೀಡಿರುವ ವೀರಶೈವ ಸಮಾಜದ ಅಧ್ಯಕ್ಷ ಶೇಖರಪ್ಪ ಪಾಟೀಲ್, ಕಳೆದ ವರ್ಷದಂತೆ ಈ ವರ್ಷ ತಾಲೂಕು ವೀರಶೈವ ಸಮಿತಿ ಆಶ್ರಯದಲ್ಲಿ ನಡೆಯುವ ಉಚಿತ ಪ್ರಸಾದ ನಿಲಯಕ್ಕೆ ಅರ್ಜಿ ಸಲ್ಲಿಸುವವರಿಗೆ ಜೂ.15ಕಡೆಯ ದಿನ ಎಂದು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಜೂ. 16ರಂದು ಚೆನ್ನಬಸವ ಪ್ರಸಾದ ನಿಲಯದಲ್ಲಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮೊದಲಾದ್ಯತೆ ನೀಡಲಾಗುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಬಸವರಾಜ ಗುಂಜಳ್ಳಿ, ಶರಣಬಸವ ನೀರಮಾನ್ವಿ ತಿಳಿಸಿದ್ದಾರೆ.