ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪದವಿ ಕಾಲೇಜು ಪ್ರವೇಶ ಆರಂಭ

Lingaraj Badiger
Updated On : 6 Jun 2013, 11:00 am

ಸಿಂಧನೂರು: ಸಿಂಧನೂರಿನ ಸರ್ಕಾರಿ ಮಹಾವಿದ್ಯಾಲಯದಲ್ಲಿ 2013- 2014 ನೇ ಸಾಲಿನ ಪದವಿ ಕೋರ್ಸ್‌ಗಳ ಪ್ರವೇಶ ಆರಂಭವಾಗಿವೆ ಎಂದು ಸರ್ಕಾರಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಹ್ಲಾದ ರೆಡ್ಡಿ ತಿಳಿಸಿದ್ದಾರೆ.  ಬಿಎ,ಬಿಕಾಂ, ಬಿಎಸ್ಸಿ, ಬಿಬಿಎಂ ಪದವಿಗಳ ಪ್ರವೇಶಗಳು ಆರಂಭವಾಗಿವೆ. ಕಳೆದ ವರ್ಷ ಈ ಮಹಾವಿದ್ಯಾಲಯದಿಂದ ಅತ್ಯುತ್ತಮ ಫಲಿತಾಂಶ ಬಂದಿದೆ. ನುರಿತ ಪ್ರಾಧ್ಯಾಪಕ ವರ್ಗ, ಕಡಿಮೆ ಬೋಧನಾ ಶುಲ್ಕ, ವಿಶಾಲವಾದ ಕ್ರೀಡಾಂಗಣ, ಸುಮಾರು 46 ಸಾವಿರ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ, ವಿಜ್ಞಾನಕ್ಕೆ ಸಂಬಂಧಿಸಿದಂತೆ ಸುಸಜ್ಜಿತ ಪ್ರಯೋಗಾಲಯ ಹೊಂದಿದ್ದು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಉತ್ತಮ ಪರಿಸರ ಹೊಂದಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನೈರ್ಮಲ್ಯ: ಇಂದು ಕಾರ್ಯಾಗಾರ
ಸಿಂಧನೂರು: ಸಿಂಧನೂರಿನ ನಗರಸಭೆಯಲ್ಲಿ ಜೂ. 6ರಂದು ಬಿಆರ್‌ಜಿಎಫ್ ಯೋಜನೆಯಡಿ ಸಿಟಿ ಸ್ಯಾನಿಟೇಷನ್ ಪ್ಲಾನ್ ತಯಾರಿಸುವ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಪೌರಾಯುಕ್ತ ನಾಸೀರ್ ಅಲಿ ತಿಳಿಸಿದ್ದಾರೆ. ಕಾರ್ಯಾಗಾರಕ್ಕೆ ಸಾರ್ವಜನಿಕರು, ನಗರಸಭಾ ಸದಸ್ಯರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ವಿನಂತಿಸಿದ್ದಾರೆ.
ಪಪೂ ಕಾಲೇಜು
ಪ್ರವೇಶ ಆರಂಭ
ಸಿಂಧನೂರು: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಿಗೆ ಪ್ರವೇಶಗಳು ಆರಂಭವಾಗಿವೆ ಎಂದು ಕಾಲೇಜು ಪ್ರಾಚಾರ್ಯ ಸುಭಾಸ್ ಕುಲಕರ್ಣಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅನುಭವಿ ಸಿಬ್ಬಂದಿ, ಕಡಿಮೆ ಬೋಧನಾ ಶುಲ್ಕ ಇರುತ್ತದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement