ಅರಕೇರಾದಲ್ಲಿ ಭಾರೀ ಮಳೆ
ರಾಯಚೂರು: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಬಹುತೇಕ ಕಡೆ ಮಳೆ ಸುರಿದಿದ್ದು, ಅತೀ ಹೆಚ್ಚು ದೇವದುರ್ಗ ತಾಲೂಕಿನ ಅರಕೇರಾದಲ್ಲಿ 76.4 ಮಿಮೀ ಮಳೆಯಾಗಿದೆ. ನಗರದಲ್ಲಿ ಬುಧವಾರ ತಡರಾತ್ರಿ ತುಂತುರು ಮಳೆಯಾಗಿದ್ದು, 4ಮಿಮೀ ಮಳೆ ಬಿದ್ದಿದೆ. ಅದೇ ರೀತಿ ತಾಲೂಕಿನ ಯರಗೇರಾದಲ್ಲಿ 2ಮಿಮೀ, ಕಲ್ಮಲಾ- 62ಮಿಮೀ, ದೇವಸೂಗೂರು- 14ಮಿಮೀ, ಗಾಜರಾಳ- 14.4ಮಿಮೀ, ಜೇಗರಕಲ್- 6.3ಮಿಮೀ ಮಳೆಯಾಗಿದೆ.
ಮಾನವಿಯಲ್ಲಿ 27ಮಿಮೀ ಮಳೆಯಾಗಿದ್ದು, ಅದೇ ತಾಲೂಕಿನ ಕಲ್ಲೂರು- 15.6ಮಿಮೀ, ಸಿರವಾರ-47.8ಮಿಮೀ, ಮಲ್ಲಟ- 43ಮಿಮೀ, ಕುರುಕುಂದಾ- 48ಮಿಮೀ, ಕವಿತಾಳ- 18ಮಿಮೀ, ಪಾಮನಕಲ್ಲೂರು- 5ಮಿಮೀ, ರಾಜಲಬಂಡಾ- 37.8ಮಿಮೀ ಹಾಗೂ ಹಾಲಾಪುರದಲ್ಲಿ 6.1ಮಿಮೀ ಮಳೆ ಬಿದ್ದಿದೆ. ಲಿಂಗಸ್ಗೂರು ಪಟ್ಟಣದಲ್ಲಿ 7.8 ಮಿಮೀ, ಹಟ್ಟಿ-31ಮಿಮೀ, ಮಸ್ಕಿ-7.8ಮಿಮೀ, ಮುದಗಲ್- 3.4ಮಿಮೀ ಮಳೆಯಾಗಿದೆ. ದೇವದುರ್ಗದಲ್ಲಿ 52.8 ಮಿಮೀ ಮಳೆಯಾದರೆ ಆ ತಾಲೂಕಿನ ಅರಕೇರಾದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು 76.4 ಮಿಮೀ ಮಳೆಯಾಗಿದೆ. ಗಬ್ಬೂರು- 37ಮಿಮೀ, ಗಲಗ- 35ಮಿಮೀ, ಜಾಲಹಳ್ಳಿ- 40ಮಿಮೀ ಮಳೆ ಬಿದ್ದಿದೆ. ಸಿಂಧನೂರಿನಲ್ಲಿ 4.8 ಮಿಮೀ, ಅದೇ ತಾಲೂಕಿನ ಜವಳಗೇರಾ- 16.4 ಮಿಮೀ, ಸಾಲಗುಂದಾ-24.4 ಮಿಮೀ, ಬಳಗಾನೂರು-15.4 ಮಿಮೀ, ತುರುವಿಹಾಳ-6.3 ಮಿಮೀ, ವಲ್ಕಂದಿನ್ನಿ- 10.2 ಮಿಮೀ, ಗುಂಜಳ್ಳಿ-10ಮಿಮೀ, ಹೆಡಗಿನಾಳ- 25.5ಮಿಮೀ ಮತ್ತು ಗುಡದೂರಿನಲ್ಲಿ 5.3ಮಿಮೀ ರಷ್ಟು ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ವಿಕಲಚೇತನರಿಂದ ಅರ್ಜಿ ಆಹ್ವಾನ
ರಾಯಚೂರು: ಸ್ವಯಂ ಉದ್ಯೋಗ ಯೋಜನೆ ಅಡಿ ಅರ್ಹ ವಿಕಲಚೇತನರಿಂದ ಅಗತ್ಯ ಸೇವಾ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನಿಷ್ಠ ಶೇ.40ರಷ್ಟು ವಿಕಲತೆ ಹೊಂದಿರುವ ಅಕ್ಷರಸ್ಥ ನಿರುದ್ಯೋಗಿ ವಿಕಲಚೇತನರು ಸ್ವಯಂ ಉದ್ಯೋಗ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜೂ.29 ಕಡೆಯ ದಿನವಾಗಿದೆ. ವಿಕಲಚೇತನರು ವೈದ್ಯಕೀಯ ಪರಿಹಾರ ನಿಧಿ ಯೋಜನೆಯಲ್ಲಿ ಸರ್ಕಾರಿ ಅಥವಾ ಖಾಸಗಿ ಸುಸಜ್ಜಿತ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಲ್ಲಿ ಗರಿಷ್ಠ 35 ಸಾವಿರ ಸಾಲ ಮಂಜೂರಾತಿಗೆ ಅವಕಾಶವಿದೆ. ಅರ್ಹ ವಿಕಲಚೇತನರು ಜೂ. 31ರೊಳಗೆ ಅರ್ಜಿ ಸಲ್ಲಿಸಬಹುದು. ಸಾದಾ ತ್ರಿಚಕ್ರ ವಾಹನ, ಗಾಲಿಕುರ್ಚಿ, ಕ್ರಚರ್ಸ್, ಶ್ರವಣ ಸಾಧನ ಹಾಗೂ ಇನ್ನಿತರೆ ಸಾಧನ ಸಲಕರಣೆಗಳನ್ನು ಪಡೆಯಲು ಅರ್ಜಿಯೊಂದಿಗೆ ವಿಕಲಚೇತನರ ಗುರುತಿನ ಚೀಟಿ ಹಾಗೂ ಆದಾಯ ಪತ್ರ ಲಗತ್ತಿಸಿರಬೇಕು.
ವಿದ್ಯಾರ್ಥಿ ವೇತನ: ವಿಕಲಚೇತನರ ವಿದ್ಯಾರ್ಥಿ ವೇತನ ಯೋಜನೆಯಡಿ 2013- 14ನೇ ಸಾಲಿಗೆ ಜಿಲ್ಲಾ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜು, ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಂದ ವೇತನಕ್ಕಾಗಿ ಅರ್ಜಿ ಕರೆಯಲಾಗಿದೆ. ಅರ್ಜಿಗಳನ್ನು ಜೂ.31ರೊಳಗೆ ಶಾಲಾ- ಕಾಲೇಜುಗಳಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳ ಕಚೇರಿ, ಬಾಪೂಜಿ ಪ್ರೌಢಶಾಲೆ ಹತ್ತಿರ, ಸಿಯಾತಲಾಬ್, ರಾಯಚೂರು ಇಲ್ಲಿಗೆ ಅಥವಾ ದೂ. 08532- 280358 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.