ಆರ್ಟಿಪಿಎಸ್ 5ನೇ ಘಟಕ ಸ್ಥಗಿತ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 5ನೇ ಘಟಕವು ತಾಂತ್ರಿಕ ದೋಷದಿಂದ ಬುಧವಾರ ರಾತ್ರಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ವಿದ್ಯುತ್ ಘಟಕದ ಬಾಯ್ಲರ್ ಟ್ಯೂಬ್ನಲ್ಲಿ ಸೋರಿಕೆ ಕಂಡುಬಂದಿದ್ದರಿಂದ ಕೆಪಿಸಿ ಅಧಿಕಾರಿಗಳು ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಿದರೆಂದು ಮೂಲಗಳು ತಿಳಿಸಿವೆ. ಈ ಮಧ್ಯೆ ರಾಜ್ಯದಲ್ಲಿ ವಿವಿಧೆಡೆ ಮಳೆ ಸುರಿದಿರುವುದರಿಂದ ವಿದ್ಯುತ್ಗೆ ಬೇಡಿಕೆ ತಗ್ಗಿದೆ. ಈ ಹಿನ್ನೆಲೆಯಲ್ಲಿ ಆರ್ಟಿಪಿಎಸ್ನ 2 ಮತ್ತು 7ನೇ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ.